Bengaluru CityCinemaKarnatakaLatestMain PostSandalwoodTV Shows

ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

ದೊಡ್ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡು 5ನೇ ವಾರದತ್ತ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ (Kavyashree) ಮತ್ತು ರಾಕೇಶ್ ಅಡಿಗ (Rakesh Adiga) ಮಧ್ಯೆ ಅಸಮಾಧಾನದ ಹೊಗೆಯಾಡುತ್ತಿದೆ. ಕಾವ್ಯ ವಿರುದ್ಧ ರಾಕೇಶ್ ಫುಲ್ ಗರಂ ಆಗಿದ್ದಾರೆ.

ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರಾಕೇಶ್ ಸ್ಮಾರ್ಟ್ ಗೇಮ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದಾ ಮಹಿಳಾ ಸ್ಪರ್ಧಿಗಳ ಜೊತೆಯಿರುವ ರಾಕೇಶ್, ಮನೆಯ ಮಹಿಳಾ ಮಣಿಯರ ಫೇವರೇಟ್ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಅಮೂಲ್ಯ(Amulya Gowda) ಜೊತೆ ರಾಕಿ ಇರೋದನ್ನ ನೋಡಿ, ನನ್ನ ಅಣ್ಣ ಕೈತಪ್ಪಿ ಹೋದ ಎಂದು ಹಾಸ್ಯಮಯವಾಗಿ ಎಲ್ಲರನ್ನೂ ಕಾವ್ಯ ರಂಜಿಸಿದ್ದರು. ಇಷ್ಟೇಲ್ಲಾ ಆತ್ಮೀಯತೆ ಕಾವ್ಯ ಮತ್ತು ರಾಕಿ ನಡುವೆ ಇತ್ತು. ಈಗ ಕಾವ್ಯ ವಿರುದ್ಧ ರಾಕೇಶ್ ಸಿಡಿದೆದಿದ್ದಾರೆ.

ಈ ವಾರದ ಅನುಪಮಾ ಗೌಡ (Anupama Gowda) ಮನೆಯ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ನೀಡಿರುವ ಟಾಸ್ಕ್ ಓದುವ ಸಮಯದಲ್ಲಿ ಕಾವ್ಯಶ್ರೀ ನಕ್ಕಿದ್ದಾರೆ. ಈ ವೇಳೆ ರಾಕೇಶ್, ಕಾವ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟಾಸ್ಕ್ ವಿಷ್ಯ ಹೇಳುವಾಗ ನಗಬಾರದು ಎಂದು ತಿಳಿಯುವುದಿಲ್ಲಲ್ವಾ. ಸ್ಪಲ್ವ ಸಮಯದ ಮುಂಚೆ ಪಾತ್ರೆ ತೊಳೆಯಲು ಮೂರು ಬಾರಿ ಕರೆದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈಗ ಇಲ್ಲಿ ಕೂತು ನಗುತ್ತೀರಾ ಎಂದು ರಾಕೇಶ್ ಕಾವ್ಯಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ

ರಾಕಿ ಮಾತಿಗೆ ಕಾವ್ಯಶ್ರೀ ಕೂಡ ಖಾರವಾಗಿಯೇ ಉತ್ತರ ನೀಡಿದ್ದಾರೆ. ನಾನು ನಗೋದಕ್ಕೂ ನಿಮ್ಮ ಪರ್ಮಿಷನ್ ಕೇಳಬೇಕಾ ಎಂದು ಕಾವ್ಯಶ್ರೀ ಮಾತನಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ನಾಲ್ಕನೇ ಎಲಿಮಿನೇಷನ್ ಭಿನ್ನವಾಗಿ ನಡೆದಿತ್ತು. ಮಯೂರಿ ಮನೆಯಿಂದ ಹೊರಬಂದಿದ್ದರು. ಈ ವಾರ ಯಾವ ಸ್ಪರ್ಧಿಗೆ ಆಟ ಕೊನೆಯಾಗುತ್ತೇ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button