ದೊಡ್ಮನೆಯಲ್ಲಿ ಮೊದಲ ಸೀಸನ್‌ನಿಂದಲೂ ಕೆಲವು ಪದ್ಧತಿಯನ್ನ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನೂ ಮನೆಯ ರೂಲ್ಸ್ ಫಾಲೋ ಮಾಡದೇ ಇದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇದೀಗ ರೂಪೇಶ್ ಶೆಟ್ಟಿ(Roopesh Shetty) ಮಾಡಿದ್ದ ಸಣ್ಣ ತಪ್ಪಿಗೆ ಬಿಗ್ ಬಾಸ್(Bigg Boss) ದೊಡ್ಡ ಶಿಕ್ಷೆಯನ್ನೆ ಕೊಟ್ಟಿದ್ದಾರೆ. ರೂಪೇಶ್ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ.
ಸಾನ್ಯ(Sanya Iyer) ಎಲಿಮಿನೇಷನ್ ನೋವಿನಿಂದ ಇರುವ ರೂಪೇಶ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಪನಿಶ್ಮೆಂಟ್ ನೀಡುತ್ತಾರೆ. ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿ, ಇದಕ್ಕೆ ಪನಿಶ್ಮೆಂಟ್ ನೀಡಲಾಗಿದೆ.

ಅಮೂಲ್ಯ ಗೌಡ ಅವರು ರೂಪೇಶ್ ಅವರ ಗಾಜಿನ ಲೋಟವನ್ನು ಕಿತ್ತುಕೊಂಡು ಓಡಿದ್ದಾರೆ. ಇದರಿಂದ ರೂಪೇಶ್ ಪೇಚಿಗೆ ಸಿಲುಕಿದ್ದಾರೆ. ಈ ಪನಿಶ್ಮೆಂಟ್ನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಂತೂ ನಿಜ. ಈ ಮೊದಲು ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಆದರೆ, ಅವರಿಗೆ ಬಿಗ್ ಬಾಸ್ ಪನಿಶ್ಮೆಂಟ್ ನೀಡಿಲ್ಲ. ಈ ಬಗ್ಗೆ ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.



