ಇದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ತೃತೀಯ ಲಿಂಗಿಯ ಪ್ರವೇಶವಾಗಿದೆ. ಶೇಕಡಾ 86ರಷ್ಟು ಮತವನ್ನು ಪಡೆದುಕೊಳ್ಳುವ ಮೂಲಕ ನೀತು ವನಜಾಕ್ಷಿ (Neetu Vanaja) ಈ ಬಾರಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ತನ್ನ ಮನದ ನೋವುಗಳನ್ನು ವೇದಿಕೆಯ ಮೇಲೆ ಹಂಚಿಕೊಂಡು ನೀತು, ಬೇರೆಯವರಿಗೆ ನನ್ನ ಬದುಕು ಸ್ಪೂರ್ತಿ ಆಗಲಿ ಎನ್ನುವ ಕಾರಣಕ್ಕಾಗಿ ಬಿಗ್ ಬಾಸ್ ಗೆ ಬಂದಿರುವುದಾಗಿ ಹೇಳಿದರು.
Advertisement
ಮೂಲತಃ ಗದಗ ಜಿಲ್ಲೆಯವರಾದ ನೀತು, ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಉಪೇಂದ್ರ ನಿರ್ದೇಶನದ ಚಿತ್ರದಲ್ಲೂ ನಟಿಸಿದ್ದಾರೆ. ಅಲ್ಲದೇ, ರಿಯಾಲಿಟಿ ಶೋನಲ್ಲಿ ಭಾಗಿಯಾದ ಹೆಗ್ಗಳಿಕೆ ಇವರದ್ದು.
Advertisement
Advertisement
ಐದನೇ ಸ್ಪರ್ಧಿ
Advertisement
ಕಾಮಿಡಿ ಕಲಾವಿದ, ತುಕಾಲಿ ಸಂತೋಷ್ ಖ್ಯಾತಿಯ ಸಂತೋಷ್ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಮನೆ 5ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದರು. ಹೆಂಡತಿಯೊಂದಿಗೆ ವೇದಿಕೆಯ ಮೇಲೆ ಬಂದ ಸಂತೋಷ್ ಸಾಕಷ್ಟು ಮನರಂಜನೆಯನ್ನು ಬಿಗ್ ಬಾಸ್ ವೇದಿಕೆಯ ಮೇಲೆ ಕೊಟ್ಟರು. ಗಂಡ ಹೆಂಡತಿ ಮಾತುಕತೆ ವೇದಿಕೆಯ ಮೇಲೆ ಸಖತ್ ಮನರಂಜನೆಯನ್ನೇ ನೀಡಿತು.
ಈವರೆಗೂ ಬಿಗ್ ಬಾಸ್ ಮನೆಯಲ್ಲಿ ನಾಲ್ವರು ಸ್ಪರ್ಧಿಗಳು ಇದ್ದಾರೆ. ಅವರೆಲ್ಲರಿಗೂ ಅತೀ ಹೆಚ್ಚು ಅಂದರೆ, ಶೇಕಡಾ 93ರಷ್ಟು ವೋಟ್ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು ಸಂತೋಷ್. ಕಾಮಿಡಿ ಶೋಗಳು ಮೂಲಕ ಸಂತೋಷ್ ಮನೆಮಾತಾದವರು.
ನಾಲ್ಕನೇ ಸ್ಪರ್ಧಿ
ಹರಹರ ಮಹಾದೇವ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಯ್ ಗೌಡ (Vinay Gowda), 4ನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಯಸದೇ ಬಳಿ ಬಂದೆ ಹಾಡಿನ ಮೂಲಕ ವೇದಿಕೆಗೆ ಬಂದ ವಿನಯ್ ಗೌಡ, ತಮ್ಮ ತಂದೆಯೊಂದಿಗಿನ ನೋವಿನ ಸಂಗತಿಯನ್ನು ಹಂಚಿಕೊಂಡರು.
14 ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಕ್ಷಣ ಭಾವುಕರಾದರು. ಪತ್ನಿ ಮತ್ತು ಮಗ ಕೂಡ ಈ ಕ್ಷಣದಲ್ಲಿ ಭಾವುಕತೆಯಿಂದಲೇ ವಿನಯ್ ಗೌಡ ಅವರನ್ನು ದೊಡ್ಮನೆಗೆ ಕಳುಹಿಸಿ ಕೊಟ್ಟರು. ವಿನಯ್ ಗೌಡ ಈವರೆಗೂ ಮನೆಗೆ ಹೋದವರ ಪೈಕಿ ಅತೀ ಹೆಚ್ಚು ಅಂದರೆ, ಶೇಕಡಾ 84ರಷ್ಟು ವೋಟು ಪಡೆದುಕೊಂಡು ಆಯ್ಕೆಯಾದರು.
ಮೂರನೇ ಸ್ಪರ್ಧಿ
ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ‍್ಯಾಪರ್ ಇಶಾನಿ (Ishani). ಮೈಸೂರು ಮೂಲದ ಈ ಹುಡುಗಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್ ಆಗಿ ಅನೇಕ ಗೀತೆಗಳನ್ನು ಇವರು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.
ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ರಂಜಿಸಿದರು. ನಾಲ್ವರು ನಿರ್ಣಾಯಕರು ಇಶಾನಿಗೆ ಶೇಕಡಾ 83 ರಷ್ಟು ವೋಟು ಹಾಕುವ ಮೂಲಕ ಇಶಾನಿಯನ್ನು ಆಯ್ಕೆ ಮಾಡಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.
Web Stories