– ಅಕ್ಕ, ಬಾವ, ಮಕ್ಕಳು ಎಲ್ಲಾ ನನ್ನ ಮನೆಯಲ್ಲೇ ಇದ್ರು
ಫ್ಲಾಟ್ ವಿಚಾರವಾಗಿ ಅಕ್ಕನ ಜೊತೆ ಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ರಂಜಿತ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಲಾವಿದ. ನನಗೆ ಲೋನ್ ಸಿಗಲ್ಲ ಎಂಬ ಕಾರಣಕ್ಕೆ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದೆ ಎಂದು ರಂಜಿತ್ ತಿಳಿಸಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ರಂಜಿತ್, ಸಿವಿಲ್ ಮ್ಯಾಟರ್ ಆಗಿರುವುದರಿಂದ ಕೋರ್ಟ್ಗೆ ಹೋಗಿ ಅಂತ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಅದನ್ನ ಬಿಟ್ಮೇಲೂ ಹೋಗಿ ದೂರು ಕೊಟ್ಟಿದ್ದಾರೆ. ಅವರು ಸಿವಿಲ್ ಕೋರ್ಟ್ಗೆ ಹೋಗಬಹುದಿತ್ತಲ್ವಾ? ನನ್ನ ಮನೆಗೆ ಏಕೆ ಬಂದು, ನನ್ನ ಹೆಂಡತಿ ಮೇಲೆ ಕೈ ಮಾಡಿದ್ರು ಎಂದು ರಂಜಿತ್ ಪ್ರಶ್ನಿಸಿದ್ದಾರೆ.
ವೀಡಿಯೋ ಹರಿದಾಡುತ್ತಿರುವ ಬಗ್ಗೆ ಮಾತನಾಡಿದ ನಟ, ದೂರು ಕೊಟ್ಟಮೇಲೆ ಇದೆಲ್ಲಾ ಆಗಿದ್ದು. ಮದುವೆಯಾಗುವ ಮುಂಚೆ ನನ್ನ ಇಬ್ಬರು ಅಕ್ಕಂದಿರು ನನ್ನ ಜೊತೆಯೇ ನನ್ನ ಮನೆಯಲ್ಲೇ ಇದ್ದರು. ಮೇ 11 ಕ್ಕೆ ನನ್ನ ಮದುವೆ ಆಯ್ತು. ಎಲ್ಲರೂ ನಮ್ಮ ಜೊತೆನೆ ಇದ್ರು. ಮದುವೆಯಾದ ಮೇಲೆ ಈಗ ಆರೋಪ ಮಾಡ್ತಿದ್ದಾರೆ ಎಂದು ಅಕ್ಕನ ವಿರುದ್ಧ ದೂರಿದರು.
2017 ರಲ್ಲಿ ನಾನು ಮನೆ ತೆಗೆದುಕೊಳ್ಳುವಾಗ, ನಾನು ಕಲಾವಿದ ನನಗೆ ಲೋನ್ ಸಿಗಲ್ಲ ಎಂಬ ಕಾರಣಕ್ಕೆ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದೆ. ನನ್ನ ತಾಯಿಯೂ ಸುಮಾರು ಬಾರಿ ನನ್ನ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಡುವಂತೆ ಹೇಳಿದ್ರು. ಮದುವೆಯಾಗಲಿ ಮಾಡಿಕೊಡ್ತೀನಿ ಎನ್ನುತ್ತಿದ್ದರು. ಆದ್ರೆ ಈಗ ನನ್ನ ತಾಯಿ ಇಲ್ಲ ಎಂದು ತಿಳಿಸಿದರು.
ಅಕ್ಕನ ಪತಿ ಅರ್ಮಿಯಲ್ಲಿದ್ರು. ಅಪಾರ್ಟ್ಮೆಂಟ್ 2017-18 ರಲ್ಲಿ ರಂಜಿತ್ ಕುಮಾರ್ ಅಂತಾ ಇದೆ. ನನ್ನ ಹೆಸರು ಯಾಕೆ ಹಾಕ್ತಾರೆ? ರಿಜಿಸ್ಟರ್ ಮಾತ್ರ ಅಕ್ಕನ ಹೆಸರಲ್ಲಿದೆ. ಏಕೆಂದರೆ, ನಾನು ಬೆಂಗಳೂರಿನಲ್ಲಿ ಇರ್ತಿರಲಿಲ್ಲ. 2017-18 ರಲ್ಲಿ ಮುಂಬೈನಲ್ಲಿರುತ್ತಿದ್ದೆ. ನಾನು ಕಲಾವಿದ ಆಗಿದ್ದರಿಂದ ಲೋನ್ ಆಗ್ತಿರಲಿಲ್ಲ. ಅದಕ್ಕೆ ಅಕ್ಕನ ಹೆಸರಲ್ಲಿ ಮಾಡಿದ್ದೆ. ಅಮೌಂಟ್ ಟ್ರಾನ್ಸ್ಫರ್ ಮಾಡಿರೋದು ದಾಖಲೆ ಇದೆ. ಈ ಸಂಬAಧ ವಕೀಲರ ಮೂಲಕ ರಿಪ್ಲೆöÊ ಕಳುಹಿಸಿದ್ದೆ. ಇದಾದ ಬಳಿ ಇದನ್ನೆಲ್ಲಾ ಮಾಡ್ತಿರೋದು ಎಂದು ಆರೋಪಿಸಿದರು.
2017, 18ರಲ್ಲಿ ನಾನು ಅಪಾರ್ಟ್ಮೆಂಟ್ ತೆಗೆದುಕೊಂಡೆ. ಆಗ ಜೊತೆಯಲ್ಲೆ ಇದ್ರು. ಅವರು 2019ರಲ್ಲಿ ಅದೇ ಅಪಾರ್ಟ್ಮೆಂಟ್‌ನಲ್ಲೇ ನಿವೇಶನ ಖರೀದಿಸಿ, ಅಮೇಲೆ ಅಲ್ಲಿಗೆ ಶಿಫ್ಟ್ ಆದ್ರು. ನನ್ನ ತಾಯಿ ತೀರಿಕೊಂಡ ಮೇಲೆ ಅದನ್ನ ಬಾಡಿಗೆ ಕೊಟ್ಟು ಅವರು ನನ್ನ ಮನೆಗೆ ಬಂದು ಸೇರಿಕೊಂಡ್ರು. ಇಬ್ಬರು ಅಕ್ಕಂದಿರು, ಮಕ್ಕಳು, ಬಾವ, ಎಲ್ಲಾ ನಮ್ಮ ಜೊತೆಗೆ ಇದ್ವಿ. ತಮ್ಮ ಮದುವೆ ಆಗ್ತಾನೋ ಇಲ್ವೋ ಅಂತ ಅವರಿಗೂ ಗೊತ್ತಿರಲಿಲ್ಲ. ನಾನು ಮದುವೆ ಆದೆ. ಮದುವೆ ಆದ್ಮೇಲೆ ಬಿಟ್ಟುಕೊಡಬೇಕಿತ್ತು. ಅವರು ಕಳುಹಿಸಿರುವ ಲೀಗಲ್ ನೋಟಿಸ್‌ನಲ್ಲಿ ನಮೂದಿಸಿದ್ದಾರೆ. ಅವರ ಪ್ರೈವಸಿಗೆ ಬಿಟ್ಟು ನಾನು ಹೋಗ್ತಿದ್ದೀನಿ ಅಂತಾ ನಮೂದಿಸಿದ್ದಾರೆ. ಇದಕ್ಕೆ ನಮ್ಮ ವಕೀಲರು ರಿಪ್ಲೈ ಕೊಟ್ಟಿದ್ದಾರೆ. ಕೊಟ್ಟ ಮೇಲೆ ಅವರು ಕೋರ್ಟ್ಗೆ ಹೋಗೋಕೆ ರೆಡಿ ಇಲ್ಲ. ತಪ್ಪು ಯಾರದು ಅಂತಾ ಗೊತ್ತಾಗಲ್ವಾ? ಕೋರ್ಟ್ನಲ್ಲೇ ತೀರ್ಮಾನ ಮಾಡೋಣ ಎಂದು ತಿಳಿಸಿದರು.
ವೀಡಿಯೋ ವೈರಲ್ ಆದ ಬಗ್ಗೆ ಮಾತನಾಡಿ, ನಮ್ಮ ತಂದೆ ನಮ್ಮ ಜೊತೆ ಇದ್ದಿದ್ದು. ತಂದೆ ನಮ್ಮ ಅಕ್ಕಂದಿರಿಗೆ ಸಪೋರ್ಟ್. ನಮ್ಮ ತಂದೆ ಒಳಗೆ ಬಂದ್ರು, ಮಾತುಕತೆ ಆಗುತ್ತೆ. ಇದಾದ ಮೇಲೆ ಇವಳಿಗೆ ಹೊಡೆದಿರೋದು ಎಂದು ಸ್ಪಷ್ಟಪಡಿಸಿದರು.
ಪತ್ನಿ ಮೇಲೆ ಹಲ್ಲೆ ಕುರಿತು ಆರೋಪ ಮಾಡಿದ ರಂಜಿತ್, ಮೆಡಿಕಲ್ ಮಾಡಿಸಿದ್ದೀವಿ. ದೂರು ಕೊಡೋದು ಲೇಟ್ ಆಗಿತ್ತು. ಅವರ ಮೇಲೆ ಎನ್‌ಸಿಆರ್ ಆಗಿದೆ. ತಂದೆ, ಅಕ್ಕಂದಿರು, ಭಾವನ ಮೇಲೆ ಎನ್‌ಸಿಆರ್ ಆಗಿದೆ ಎಂದರು.