ಬಿಗ್ ಬಾಸ್ ಮನೆಗೆ (Bigg Boss House) ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ದೀಪಿಕಾ ದಾಸ್ ಆಸೆಯಂತೆ ವಾಸುಕಿ ವೈಭವ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಾಸುಕಿ ವೈಭವ್ (Vasuki Vaibhav) ಎಂಟ್ರಿಯಿಂದ ದೀಪಿಕಾ ದಾಸ್ (Deepika Das) ಖುಷಿಪಟ್ಟಿದ್ದಾರೆ.
ದೊಡ್ಮನೆಯ ಆಟ ಕಡೆಯ ಘಟ್ಟದಲ್ಲಿರುವ ಕಾರಣ, ಸ್ಪರ್ಧಿಗಳ ಆಸೆಯನ್ನ ನೆರವೇರಿಸುವುದಾಗಿ ಹೇಳಿದ್ದರು. ಅದರಂತೆ ರೂಪೇಶ್ ಶೆಟ್ಟಿ ಆಸೆಯಂತೆ ಹುಲಿವೇಷ ತಂಡ ಮನೆಗೆ ಎಂಟ್ರಿ ಕೊಟ್ಟಿತ್ತು. ಬಳಿಕ ಅರವಿಂದ್ ಕೆ.ಪಿ (Aravind Kp) ಎಂಟ್ರಿ ನಂತರ ಈಗ ವಾಸುಕಿ ವೈಭವ್ ದೊಡ್ಮನೆಗೆ ಬಂದಿದ್ದಾರೆ.
ನಮ್ಮ ಸೀಸನ್‌ನಲ್ಲಿನ (ಬಿಗ್ ಬಾಸ್ 7) ನನ್ನ ಕ್ಲೋಸ್ ಫ್ರೆಂಡ್ಸ್‌ನಿಂದ ಕಾಲ್ ಬರಬೇಕು ಎಂಬ ಆಸೆ ಇದೆ. ವಾಸುಕಿ ವೈಭವ್, ಶೈನ್ ಶೆಟ್ಟಿ, ಪ್ರಿಯಾಂಕಾ, ಕಿಶನ್, ಭೂಮಿ ಕಡೆಯಿಂದ ಕಾಲ್ ಬಂದು ನಾನು ಮಾತನಾಡಬೇಕು ಎಂಬ ಆಸೆ ಇದೆ. ಇಷ್ಟು ಜನರು ಈ ಮನೆಯೊಳಗೆ ಗೆಸ್ಟ್ ಆಗಿ ಬಂದು ನನ್ನೊಂದಿಗೆ ಟೈಮ್ ಸ್ಪೆಂಡ್ ಮಾಡಬೇಕು ಎಂದು ದೀಪಿಕಾ ದಾಸ್ ಕೋರಿದ್ದರು. ವಾಸುಕಿ ವೈಭವ್ ಬರುವ ಮೂಲಕ ದೀಪಿಕಾ ದಾಸ್ (Deepika Das) ಅವರ ಇಚ್ಛೆಯನ್ನ ಬಿಗ್ ಬಾಸ್ ಈಡೇರಿಸಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್
ಬಿಗ್ ಬಾಸ್ ಮನೆಗೆ ಬಂದ್ಮೇಲೆ ಮತ್ತೆ ನಮ್ಮ ಸೀಸನ್ ಮೆಮೊರೀಸ್ ರೀಕಾಲ್ ಆಗುತ್ತಿದೆ ಎಂದರು ವಾಸುಕಿ. ಜೈಲಿನ ಬಳಿ ಹೋದ ವಾಸುಕಿ ವೈಭವ್, ಜೈಲು ನಿಜವಾಗಿಯೂ ರಿಯಲೈಸೇಷನ್ ಸೆಂಟರ್. ನಮ್ಮ ಸೀಸನ್‌ನಲ್ಲಿ ಆಲ್ಮೋಸ್ಟ್ ಎಲ್ಲರೂ ಹೋಗಿದ್ವಿ. ದೀಪಿಕಾನ ಬಿಟ್ಟು ಎಂದರು. ಹಾಗೇ ಮನಸ್ಸಿಂದ ಯಾರೂನೂ ಕೆಟ್ಟವರಲ್ಲ ಹಾಡನ್ನ ವಾಸುಕಿ ವೈಭವ್ ಹಾಡಿದರು. ಬಳಿಕ ಮತ್ತೆ ಇಲ್ಲಿಗೇ ಬಂದು ಇದೇ ಜಾಗದಲ್ಲಿ ಹಾಡುವ ಅವಕಾಶ ಸಿಕ್ತಲ್ಲ ಎಂದು ವಾಸುಕಿ ವೈಭವ್ ಸಂತಸ ವ್ಯಕ್ತಪಡಿಸಿದರು.
ನಮ್ಮ ಸೀಸನ್‌ನ ಪ್ರೈಡ್ ದೀಪಿಕಾ ದಾಸ್. ನಾವು ಕಡೆಯವರೆಗೂ ತಲೆ ಸುತ್ತಿ ಬೀಳಲಿಲ್ಲ ಅಂದ್ರೆ ಅದಕ್ಕೆ ಕಾರಣ ದೀಪಿಕಾ ದಾಸ್. ತಾಯಿ ತರಹ ನಮ್ಮನ್ನೆಲ್ಲಾ ನೋಡಿಕೊಂಡಿದ್ದಾರೆ. ಯಾವುದಕ್ಕೂ ಕಮ್ಮಿಯಾಗದ ತರಹ ನೋಡಿಕೊಂಡಿದ್ದಾರೆ. ಈ ಸೀಸನ್‌ನ ಬೆಸ್ಟ್ ಅಂದ್ರೆ, ದೀಪಿಕಾ ಮತ್ತು ಅರಣ್ ಸಾಗರ್ (Arun Sagar) ಮಾಡಿದ ಆಕ್ಟ್ ಎಂದು ವಾಸುಕಿ ಹಾಡಿ ಹೊಗಳಿದ್ದಾರೆ.