ಬಿಗ್‌ಬಾಸ್ (Bigg Boss Kannada 12) ಮನೆಯಲ್ಲಿ ಸ್ಪರ್ಧಿಗಳ ನಡುವೆ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ವ್ಯಕ್ತಿತ್ವದ ಆಟ ವೈಯಕ್ತಿಕವಾಗುತ್ತಿದೆ. ಚಟುವಟಿಕೆಯೊಂದರಲ್ಲಿ ಮಾಳು (Malu) ಹಾಗೂ ರಾಶಿಕಾ (Rashika) ನಡುವೆ ಭರ್ಜರಿ ಪೈಪೋಟಿ ನಡೆದಿದೆ.
ಆಟದ ವಿಚಾರಕ್ಕೆ ಮಾಳು ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ದ್ವೇಷಕ್ಕೆ ನಾಂದಿ ಹಾಡಿದ್ದಾರೆ. ಧೃವಂತ್, ಅಶ್ವಿನಿಗೌಡ, ಜಾನ್ವಿ ಹಾಗೂ ರಾಶಿಕಾ ಪ್ರತಿಸ್ಪರ್ಧಿ ಮಾಳು ಮೇಲೆ ಹರಿಹಾಯ್ದಿದ್ದಾರೆ. ರಾಶಿಕಾ, ಮಾಳು, ಗಿಲ್ಲಿ ನಡುವೆ ‘ಥೂ..ಥೂ..ಥೂ’ ಸಂಭಾಷಣೆ ಜೋರಾಗಿದ್ದು, ಮಾಳು ಹಾಗೂ ಗಿಲ್ಲಿಗೆ ಉದ್ದೇಶಪೂರ್ವಕವಾಗಿ ಥೂ ಥೂ ಎಂದು ಉಗಿದಿರುವ ಪ್ರೋಮೋ ರಿಲೀಸ್ ಆಗಿದೆ. ಇದನ್ನೂ ಓದಿ: ವೇಳೆ ಬದಲಿಸಿಕೊಂಡ ಅಕುಲ್ ನಡೆಸಿಕೊಡುವ ಹಳ್ಳಿ ಪವರ್ ಶೋ
ಬಿಗ್‌ಬಾಸ್ ಮಾಳುಗೆ ಕೊಟ್ಟ ಅಧಿಕಾರ ಬಳಸಿಕೊಂಡು ಕಸದ ರಾಶಿಯನ್ನ ರಾಶಿಕಾ ಮೇಲೆ ಸುರಿಯುವ ಚಟುವಟಿಕೆ ನಡೆಸಿದ್ರು. ಇದೇ ಕಾರಣಕ್ಕೆ ಕುಪಿತಗೊಂಡ ರಾಶಿಕಾ ಮಾಳು ಮೇಲೆ ಹರಿಹಾಯ್ತಿದ್ದಾರೆ. ಮಾಳು ಹಾಗೂ ರಾಶಿಕಾ ನಡುವಿನ ವಾಗ್ಯುದ್ಧದ ಮಧ್ಯದಲ್ಲಿ ಗಿಲ್ಲಿ ಇಂಟರಪ್ಟ್ ಮಾಡ್ತಾ ಥೂ ಅಂತಾರೆ. ಇದೇ ವಿಚಾರಕ್ಕೆ ಟ್ರಿಗರ್ ಆದ ರಾಶಿಕಾ ಥೂ ಥೂ ಥೂ ಎಂದು ಮೂರು ಬಾರಿ ಹೇಳಿ ಆಶ್ಚರ್ಯವುಂಟುಮಾಡಿದ್ದಾರೆ.
ಅಸಲಿಯಾಗಿ ರಾಶಿಕಾ ಅಷ್ಟೊಂದು ಕೋಪ ಮಾಡಿಕೊಳ್ಳೋಕೆ ಸರಿಯಾದ ಕಾರಣ ಏನು ಅನ್ನೋದು ಸಂಪೂರ್ಣ ಎಪಿಸೋಡ್ ಪ್ರಸಾರವಾದ ಬಳಿಕ ಬಯಲಾಗಬೇಕಿದೆ. ಇದನ್ನೂ ಓದಿ: ಐಟಂ ಸಾಂಗ್ ಮಾಡಲು ಶ್ರೀವಲ್ಲಿ ರೆಡಿ: ಆ 4 ಜನ ಕೇಳಿದ್ರೆ ಮಾತ್ರ


