ಬಿಗ್ ಬಾಸ್ (Bigg Boss) ಮನೆಯ ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗಿಬಂದಿದ್ದ ಚೈತ್ರಾ (Chaithra) ಹೊರಗಡೆ ಆಟಗಾರರ ಬಗ್ಗೆ ನಡೆಯುತ್ತಿರುವ ವಿಚಾರವನ್ನು ಮಾತನಾಡಿದ್ದಾರೆ. ಇದಕ್ಕೆ ಸುದೀಪ್ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಡಿಮ್ಯಾಂಡ್ ಮಾಡಿ ಗೌರವ ಸಂಪಾದಿಸಿಲ್ಲ. ಕಮ್ಯಾಂಡ್ ಮಾಡಿ ಸಂಪಾದಿಸಿದ್ದು, ಎಂದು ಸುದೀಪ್ ಅವರು ಚೈತ್ರಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಜು ಮುಂದೆ ಚೈತ್ರಾ ಕಥೆ ಮೂಲಕ ಹೊರಗಿನ ಅಭಿಪ್ರಾಯ ಅಂತ ಸ್ಪರ್ಧಿಗಳ ಮುಂದೆ ಹೇಳಿದರು. ಇಂತಹ ಕಥೆಯನ್ನು ನೀವು ಯಾಕೆ ಹೇಳಿದ್ರಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ನಿಜಕ್ಕೂ ನಡೆದಿದ್ದು ಏನು ಅಂತ ಚೈತ್ರಾಗೆ ಸುದೀಪ್ (Sudeep) ಕೇಳಿದ್ದಾರೆ. ಚೈತ್ರಾ ಆಸ್ಪತ್ರೆಯಲ್ಲಿ ಡಾಕ್ಟರ್, ನರ್ಸ್ ಸ್ಪರ್ಧಿಗಳು ಹೇಳಿದ್ದನ್ನು ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು. ಅಷ್ಟಕ್ಕೆ ಬಿಡದ ಸುದೀಪ್ ಅವರು ಚೈತ್ರಾಗೆ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್
Advertisement
Advertisement
ಮೋಕ್ಷಿತಾ ಜೊತೆ ಮಾತಾಡುವಾಗ ಚೈತ್ರಾಗೆ ಕೈ ಎತ್ತದೆ ಮಧ್ಯಪ್ರವೇಶ ಮಾಡಿದರು. ನಾವು ಮಾತನಾಡುವಾಗ ಯಾಕೆ ಮಧ್ಯೆ ಬರುತ್ತೀರಾ. ನಾವು ಮಾತಾಡೋದು ಬೇಡ್ವಾ ಎಂದು ಚೈತ್ರಾರನ್ನು ಸುದೀಪ್ ಪ್ರಶ್ನೆ ಮಾಡಿದರು. ಈ ವೇಳೆ ಸುದೀಪ್ ಫುಲ್ ಗರಂ ಆದರು. ನೀವು ನನ್ನ ಏನ್ ಅನ್ಕೊಂಡಿದ್ದೀರಾ ಎಂದು ಕಿಚ್ಚ ಕೂಗಾಡಿದರು. ಮನುಷ್ಯತ್ವ, ಮಾನವೀಯತೆ, ಹೃದಯ ಮೂರರ ಜೊತೆ ಬಾಳುತ್ತಿದ್ದೇನೆ. ನಾನು ನಿಮಗೆಲ್ಲಾ ಗೌರವ ಕೊಟ್ಟು ಮಾತಾಡ್ತೀನಿ, ನಾನು ಡಿಮ್ಯಾಂಡ್ ಮಾಡಿ ಗೌರವ ಸಂಪಾದಿಸಿಲ್ಲ. ಕಮಾಂಡ್ ಮಾಡಿ ಸಂಪಾದಿಸಿದ್ದು, ಯಾಕೆ ಚೈತ್ರಾ ನೀವು ನನ್ನ ಮಾತು ಕೇಳೋದಿಲ್ಲ ಎಂದು ಸುದೀಪ್ ಹೇಳಿದರು.
Advertisement
ಧ್ವನಿ ಏರಿಸಿ ಮಾತಾಡಿದ್ದಕ್ಕೆ ಚೈತ್ರಾ ನನ್ನನ್ನು ಕ್ಷಮಿಸಿ. ನಾನು ಯಾರ ಬಳಿಯೂ ಈ ರೀತಿ ಮಾತಾಡಲು ಇಷ್ಟಪಡೋದಿಲ್ಲ ಎಂದು ಸುದೀಪ್ ಹೇಳಿದ್ರು. ಸುದೀಪ್ ಸಾರಿ ಕೇಳಿದರು. ಚೈತ್ರಾ ಮತ್ತೆ ಅದೇ ರಾಗ ಎಂಬಂತೆ ಹೇಳಿದ್ದನ್ನೇ ಹೇಳುತ್ತಿದ್ದರು. ನನ್ನ ಸ್ವಾರಿಗೂ ನೀವು ಸ್ಪಂದಿಸಿಲ್ಲ. ನಿಮ್ಮ ಗಮನ ಅಲ್ಲೇ ಇತ್ತು. ಚೆನ್ನಾಗಿ ಬೆಳೆಯಿರಿ ಚೈತ್ರಾ ಎಂದು ಸುದೀಪ್ ಕಿವಿಹಿಂಡಿದರು.
Advertisement
ಬಳಿಕ ಚೈತ್ರಾ ‘ಬಿಗ್ ಬಾಸ್’ ಕ್ಯಾಮೆರಾ ಮುಂದೆ ಹೋಗಿ ಮಾತಾಡಿದರು. ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ನನಗೆ ಇರಲು ಆಗಲ್ಲ ನಾನು ಮನೆಗೆ ಹೋಗ್ತೀನಿ ಎಂದು ಅಳುತ್ತಾ ಕೇಳಿಕೊಂಡರು. ಬಳಿಕ ಈ ಬಗ್ಗೆ ಮಾತಾಡಿದ ಸುದೀಪ್, ಇದು ನೀವೇ ಸೃಷ್ಟಿಸಿಕೊಂಡ ವಾತಾವರಣ ಎಂದು ಹೇಳಿದರು. ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗಿ ಎಂದ ಕಿವಿ ಮಾತು ಹೇಳಿದರು. ಬಳಿಕ ಎಲ್ಲರ ಬಳಿಯೂ ಚೈತ್ರಾ ಕ್ಷಮೆ ಕೇಳಿದರು.