‘ಬಿಗ್ ಬಾಸ್’ (Bigg Boss) ಖ್ಯಾತಿಯ ನಮ್ರತಾ ಗೌಡ (Namratha Gowda0 ಇದೀಗ ಬೆಡ್‌ರೂಮ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಮ್ರತಾ ಫೋಟೋಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಬಂದಿದೆ.
ಸದಾ ಒಂದಲ್ಲಾ ಒಂದು ಫೋಟೋಗಳ ಮೂಲಕ ನಮ್ರತಾ ಸದ್ದು ಮಾಡುತ್ತಲೇ ಇರುತ್ತಾರೆ. ಮತ್ತೆ ನಯಾ ಫೋಟೋಶೂಟ್ ಮಾಡಿಸಿ ಗಂಡ್ ಹೈಕ್ಳ ಹಾರ್ಟ್‌ನಲ್ಲಿ ಚಿಟ್ಟೆ ಬಿಟ್ಟಿದ್ದಾರೆ. ಇದನ್ನೂ ಓದಿ:ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್
ರೆಡ್ ಕಲರ್ ಲಾಂಗ್ ಡ್ರೆಸ್‌ನಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಬೆಡ್ ಮೇಲೆ ಮಲಗಿ ಸೆಕ್ಸಿ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಮ್ರತಾ ನಯಾ ಫೋಟೋ ನೋಡ್ತಿದ್ದಂತೆ ಪಡ್ಡೆಹುಡುಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿದೆ. ಬ್ಯೂಟಿಫುಲ್, ಸೆಕ್ಸಿ, ಬೋಲ್ಡ್ ಹೀಗೆ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ನಿಮಗೆ ಬಾಯ್‌ಫ್ರೆಂಡ್ ಇದ್ದಾರಾ ಎಂದು ಕೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ (Bigg Boss Kannada 10) ಸಂಚಲನ ಮೂಡಿಸಿದ ನಮ್ರತಾ ಗೌಡ ಅವರ ಹೆಸರು ಸ್ನೇಹಿತ್ ಗೌಡ ಮತ್ತು ಕಾರ್ತಿಕ್ ಮಹೇಶ್ (Karthik Mahesh) ಜೊತೆ ಕೇಳಿ ಬಂದಿತ್ತು. ಆದರೆ ಕೆಲ ಮನಸ್ತಾಪಗಳಿಂದ ಸ್ನೇಹಿತ್ ಜೊತೆಗಿನ ಸ್ನೇಹಕ್ಕೆ ನಟಿ ಅಂತ್ಯ ಹಾಡಿದ್ದರು.
ಅಂದಹಾಗೆ, ಪುಟ್ಟಗೌರಿ ಮದುವೆ, ನಾಗಿಣಿ 2 ಸೀರಿಯಲ್ ನಮ್ರತಾಗೆ ಜನಪ್ರಿಯತೆ ನೀಡಿತ್ತು. ಅದರಲ್ಲೂ ‘ನಾಗಿಣಿ 2’ (Nagini 2) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿದೆ.
ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 20ಕ್ಕೂ ಹೆಚ್ಚು ವರ್ಷಗಳಿಂದ ನಟನೆಯಲ್ಲಿ ನಮ್ರತಾ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿನಿಮಾದಲ್ಲಿ ಮಿಂಚಲು ನಮ್ರತಾ ಸಿದ್ಧತೆ ನಡೆಸುತ್ತಿದ್ದಾರೆ.