ಬಿಗ್ ಬಾಸ್ (Bigg Boss Kannada) ಸ್ಪರ್ಧಿಗಳನ್ನು ಆಯ್ಕೆ ಮಾಡುವುದು ಸುಲಭವಲ್ಲ. ಅವರ ಹಿನ್ನೆಲೆ, ವ್ಯಕ್ತಿತ್ವ ಮತ್ತು ಜನಪ್ರಿಯತೆಯನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇನ್ನೂ ಹಲವಾರು ಟೆಸ್ಟ್ ಗಳನ್ನು ಮಾಡಿಯೇ ದೊಡ್ಮನೆ ಒಳಗೆ ಜನರನ್ನು ಕಳುಹಿಸಲಾಗುತ್ತಿದೆ ಎನ್ನುವ ವಿಚಾರವನ್ನು ಈಗ ಬಹಿರಂಗ ಪಡಿಸಿದ್ದಾರೆ ಕಿಚ್ಚ ಸುದೀಪ್.
Advertisement
ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿಕೊಳ್ಳಬಾರದು, ಅವಮಾನಿಸಬಾರದು, ದೈಹಿಕ ಹಿಂಸೆಯನ್ನು ಮಾಡಬಾರದು ಎಂದೆಲ್ಲ ರೂಲ್ಸ್ ಇವೆ. ಅಹಿತಕರ ಘಟನೆಗಳು ಮನೆಯಲ್ಲಿ ಆಗಬಾರದು ಎನ್ನುವ ಕಾರಣಕ್ಕಾಗಿಯೇ ಸೈಕಿಯಾಟಿಸ್ಟ್ ಟೆಸ್ಟ್, ಮೆಡಿಕಲ್ ಟೆಸ್ಟ್ (Test) ಮಾಡಿಸಿಯೇ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಕಿಚ್ಚ ಸುದೀಪ್ (Kiccha Sudeep)ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿಯನ್ನು ಹೊರ ಹಾಕಿದರು.
Advertisement
Advertisement
ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ದಾಖಲೆ ಏನು?
Advertisement
ಕನ್ನಡದ ಬಿಗ್ ಬಾಸ್ ನಾನಾ ಕಾರಣಗಳಿಂದಾಗಿ ವಿಶೇಷ ಮತ್ತು ಹೊಸತು ಅನಿಸುತ್ತದೆ. ಇಂತಹ ಶೋ ಮೂಲಕ ಕಿಚ್ಚ ಸುದೀಪ್ ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯೇ ಇಂದು ಬಹಿರಂಗ ಪಡಿಸಿದೆ. ಈ ಮೂಲಕ ಸುದೀಪ್ ವೃತ್ತಿ ಬದುಕಿಗೆ ಇದೊಂದು ಗೌರವದ ಸಂಗತಿಯೂ ಆಗಿದೆ.
ಭಾರತದಾದ್ಯಂತ ಬಿಗ್ ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್ ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.
ಕೇವಲ ಟಿವಿಯಲ್ಲಿ ಪ್ರಸಾರವಾಗುವ ಶೋ ಮಾತ್ರವಲ್ಲ, ಓಟಿಟಿಗಾಗಿ ಬಿಗ್ ಬಾಸ್ ಆಯೋಜನೆ ಮಾಡಿದ್ದರೂ, ಅದನ್ನೂ ಸುದೀಪ್ ಅವರೇ ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅಡುಗೆ ರೀತಿಯ ಕಾರ್ಯಕ್ರಮವನ್ನೂ ಅವರು ಆಯೋಜನೆ ಮಾಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಸುದೀಪ್ ವಿಶೇಷ ಅನಿಸುತ್ತಾರೆ.
Web Stories