‘ಬಿಗ್ ಬಾಸ್’ ಮನೆಯಲ್ಲಿ ನನಗೆ ಆರೋಗ್ಯ ಕೈಕೊಟ್ಟಿತು : ಸ್ನೇಕ್ ಶ್ಯಾಮ್

Public TV
2 Min Read
Snake Shyam 4

ಬಿಗ್ ಬಾಸ್ ಕನ್ನಡ  (Bigg Boss Kannada) ಸೀಸನ್ 10ರ ಮೊದಲ‌ ವೀಕೆಂಡ್ ಎಪಿಸೋಡಿನ‌ ಕಿಚ್ಚನ ಪಂಚಾಯಿತಿ ನಿನ್ನೆ ನಡೆದಿತ್ತು.  ಅದರ ಮುಂದುವರಿದ ಭಾಗವಾಗಿ ಇಂದಿನ ‘ಸೂಪರ್ ಸಂಡೆ ಸುದೀಪ್ (Sudeep) ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆಗೆ ಮಾತುಕತೆಗೆ ಇಳಿದ ಕಿಚ್ಚ, ತಮಾಷೆಯಾಗಿ ಮಾತಾಡುತ್ತ, ನಗುನಗಿಸುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದರು.

Snake Shyam 1 2

ನಿನ್ನೆಯ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್‌ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್‌ ಶ್ಯಾಮ್‌ (Snake Shyam) ಅವರು. ಅವರಲ್ಲಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಎವಿಕ್ಟೆಡ್ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ (Eliminate) ಬಿದ್ದಿದ್ದಾರೆ.

Snake Shyam 2 2

ಐವತ್ತೆಂಟು ಸಾವಿರ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಹೊಂದಿದ್ದ ಶ್ಯಾಮ್ ಅವರನ್ನು ಜನರು ಹೋಲ್ಡ್ ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. ‘ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ’ ಎಂದೂ ಆಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ. ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.

Snake Shyam 3 2

‘ನನಗೆ ಇಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಹೆಲ್ತ್ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡರು.

 

ಶ್ಯಾಮ್ ಅವರನ್ನು ಬೀಳ್ಕೊಟ್ಟ ಉಳಿದ ಸ್ಪರ್ಧಿಗಳು ಸದ್ಯಕ್ಕೇನೋ ನಿರಾಳರಾಗಿದ್ದಾರೆ. ಆದರೆ ಈ ನೆಮ್ಮದಿ ಎಷ್ಟು ಕಾಲ ಇರಬಹುದು? ಎರಡನೇ ವಾರದ ಬಿಗ್ ಬಾಸ್ ಮನೆಯೊಳಗಿನ ಬದುಕು ಹೇಗಿರಬಹುದು? ಬಿಗ್ ಬಾಸ್ ಮನೆಯೊಳಗಿನಿಂದ ಹೊರಬೀಳುವ ಮುಂದಿನ ಸ್ಪರ್ಧಿ ಯಾರು? ಹೀಗೆ ಹತ್ತಾರು ವಿಷಯಗಳನ್ನು JioCinema 24ಗಂಟೆ ನೇರಪ್ರಸಾರದಲ್ಲಿ ನೋಡಬಹುದು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article