ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ದೊರೆತಿದೆ.
ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!
Advertisement
Advertisement
2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್‍ಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈ ಪತ್ರವನ್ನು ಇಂದು ಬಿಎಸ್‍ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್‍ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?
Advertisement
ಹಾಗಾದ್ರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್‍ವೈ ಅವರ `ಕೈ’ ಬರಹ ಅಲ್ಲ ಅಂತ ಸ್ಪಷ್ಟನೆ ನೀಡುತ್ತಿದೆ.
Advertisement
ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಆರೋಪ ಕೇವಲ ರಾಜಕೀಯ ಕೆಸರೆರಚಾಟಕ್ಕೆ ಮಾತ್ರನಾ. ಹಾಗೂ ತಾರ್ಕಿಕ ಅಂತ್ಯಕ್ಕೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗೋದಿಲ್ಲವಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?