ಚಿತ್ರದುರ್ಗ: ಇಲ್ಲಿನ ಆಶ್ರಮದ (Chitradurga Ashram) ನೀರಿನ ತೊಟ್ಟಿಯಲ್ಲಿ ಬಿದ್ದು ತಾಯಿ-ಮಗಳು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಸಹಜ ಸಾವು ಎನಿಸಿದ್ದರೂ, ಕೊಲೆ ಶಂಕೆ ವ್ಯಕ್ತವಾಗಿದೆ.
Advertisement
ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ಹಲವು ವರ್ಷಗಳಿಂದ ಈ ಆಶ್ರಮದ ಪೂಜಾರಿಯಾಗಿರುವ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಅವರ ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ನಿನ್ನೆ (ಮಂಗಳವಾರ) ರಾತ್ರಿ ಪತ್ತೆಯಾಗಿವೆ. ನೋಡಲು ಸಹಜ ಸಾವಿನಂತೆ ಕಂಡುಬಂದರೂ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ಕೈ ಬಲಪಡಿಸಬೇಕಾ?: ಹೆಚ್‍ಡಿಡಿ ವಾಗ್ದಾಳಿ
Advertisement
Advertisement
ಮೊದಲಿಗೆ ಗೀತಾ ಮಾನಸಿಕ ಖಿನ್ನತೆಯಿಂದ (Mental Depression) ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಆಶ್ರಮದ ಗೋಡೆ ಮೇಲೆ ತಾಯಿ-ಮಗಳ ಹೆಸರಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಡೆತ್ ನೋಟ್ ಪರಿಶೀಲಿಸಿದ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ನಡುವೆ ಮೃತ ಗೀತಾಳ ಸಹೋದರ ಠಾಣೆಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
Advertisement
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಪ್ರಕರಣದ ತನಿಖೆ ಚುರುಕುಗೊಳಿಸಿದ್ದೇವೆ. ವಶಪಡಿಸಿಕೊಂಡಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?