ನವದೆಹಲಿ: ಚುನಾವಣೆಗಳಲ್ಲಿ (Election) ದೇಶಾದ್ಯಂತ ವಯಸ್ಕರ ಮೂರನೇ ಒಂದು ಭಾಗಷ್ಟು ಮತದಾನದಲ್ಲಿ ಕೊರತೆಯಾಗುತ್ತಿದೆ. ಅಲ್ಲದೇ ಕೆಲಸಗಳಿಗಾಗಿ ವಲಸೆ ಹೋಗಿರುವ ಎಷ್ಟೋ ಜನರು ರಜೆಯ ಕೊರತೆಯ ಕಾರಣ ಮತದಾನ ಮಾಡೋದನ್ನೇ ತಪ್ಪಿಸುತ್ತಿದ್ದಾರೆ. ಆದ್ದರಿಂದ ಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ (Election Commission) ಮಾಸ್ಟರ್ ಪ್ಲ್ಯಾನ್ ಮಾಡಿದೆ.
Advertisement
ದೂರದ ಪ್ರದೇಶಗಳಲ್ಲಿರುವ ಜನರು ತಾವಿದ್ದ ಸ್ಥಳದಿಂದಲೇ ಮತ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಹೊಸ ರೀತಿಯ ಎಲೆಕ್ಟ್ರಾನಿಕ್ ಮತದಾನ ಯಂತ್ರ (EVM) ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಸಲು ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದೆ. ಸುಮಾರು 72 ಕ್ಷೇತ್ರಗಳಲ್ಲಿ ಮತದಾನ ಸಂಗ್ರಹ ಮಾಡಲು ಈ ಮಿಷಿನ್‌ನಲ್ಲಿ ಪ್ರೋಗ್ರಾಮ್ ಮಾಡಬಹುದಾಗಿದೆ. ಇದರಿಂದ ದೂರದಲ್ಲಿರುವ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.
Advertisement
Advertisement
ರಿಮೋಟ್ ಮತದಾನದ (Remote Voting Machine) ಪರಿಕಲ್ಪನೆಯ ಬಗ್ಗೆ ಅರಿತುಕೊಳ್ಳಲು ತೆಗೆದುಕೊಳ್ಳಬೇಕಾದ ಕಾನೂನು ಹಾಗೂ ತಾಂತ್ರಿಕ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಟಿಪ್ಪಣಿ ಮಾಡಲಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ
Advertisement
2019ರ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ.67.4 ಆಗಿತ್ತು. ಆದ್ರೆ ಈ ಚುನಾವಣೆಯಲ್ಲಿ 30 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸಿರಲಿಲ್ಲ ಎಂಬ ಅಂಶವನ್ನು ಚುನಾವಣಾ ಆಯೋಗ ಮನಗಂಡಿತು. ಆಂತರಿಕ ವಲಸೆ ಸೇರಿದಂತೆ ನಾನಾ ಕಾರಣದಿಂದಾಗಿ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೂ ಕಳವಳ ವ್ಯಕ್ತಪಡಿಸಿತ್ತು. ಆದ್ದರಿಂದ ಚುನಾವಣಾ ಆಯೋಗ ರಿಮೋಟ್ ವೋಟಿಂಗ್ ಮಿಷಿನ್ ಅನ್ನು ಅನುಷ್ಠಾನಕ್ಕೆ ತರಲು ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?