ಬೀದರ್: ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಂಬೈ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೀದರ್ನಲ್ಲಿ (Bidar) ಅನ್ನದಾತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇಂದು ಬೀದರ್ನಲ್ಲೂ ಅನ್ನದಾತರ ಹೋರಾಟದ ಕಿಚ್ಚು ಸ್ಫೋಟಗೊಂಡಿದೆ. ಕರ್ನಾಟಕ ರಾಜ್ಯ ರೈತ ಸಂಘದ ರೈತರು ಮುಂಬೈ-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹುಮ್ನಾಬಾದ್ ಪ್ರವಾಸಿ ಮಂದಿರದಿಂದ ಆರ್ಟಿಒ ಚೆಕ್ ಪೋಸ್ಟ್ವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆಯಿಂದ ಸ್ಟಿಂಗ್ ಆಪರೇಷನ್ ರೂವಾರಿ, ರೌಡಿಶೀಟರ್ ಫೋಟೋ ರಿಲೀಸ್
ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಜಿಲ್ಲೆಯ ಅನ್ನದಾತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ನೂರಾರು ರೈತರು ಆಗಮಿಸಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಅನ್ನದಾತರ ಹೋರಾಟದ ಕಿಚ್ಚು ಜೋರಾಗಿದ್ದು, ಬೃಹತ್ ಪ್ರತಿಭಟನೆ ಮೂಲಕ ರೈತರು ಸರ್ಕಾರಕ್ಕೆ ವಾರ್ನಿಂಗ್ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ರುವಾರಿಯ ಬಂಧನ ಆಗ್ಲೇಬೇಕು – 2 ದಿನಗಳ ಡೆಡ್ಲೈನ್ ಕೊಟ್ಟ ಹೆಚ್ಡಿಕೆ

