– ರಾಜ್ಯ ಗಡಿ ಭಾಗದಲ್ಲಿ ಕನ್ನಡಕಿಲ್ಲ ಆದ್ಯತೆ
ಬೀದರ್: ಸಿಎಂ ಇದೇ ತಿಂಗಳು 27 ರಂದು ಗಡಿ ಜಿಲ್ಲೆ ಬೀದರ್‍ನ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಾಗಲೇ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ರಸ್ತೆ, ಕುಡಿಯುವ ನೀರು. ಶಾಲೆಯ ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ.
ಅಲ್ಲದೇ ಉಜಳಾಂಬ ಗ್ರಾಮ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿನ ಮಕ್ಕಳಿಗೆ ಸರಿಯಾಗಿ ನಾಡಗೀತೆಯನ್ನು ಕೂಡ ಹಾಡಲು ಬರುತ್ತಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಬಂದ ಸಮಯದಲ್ಲಿ ನಾಡಗೀತೆ ಬರದೆ ಮುಜಗರ ಅನುಭವಿಸಬಾರದು ಎಂದು ಅಲ್ಲಿನ ಶಿಕ್ಷಕರು ಪಠ್ಯದಲ್ಲಿರೋ ನಾಡ ಗೀತೆಯನ್ನು ಮಕ್ಕಳ ಮುಂದಿಟ್ಟು ಕಂಠಪಾಠ ಮಾಡಿಸುತ್ತಿದ್ದಾರೆ.
ಗಡಿ ಜಿಲ್ಲೆಯಲ್ಲಿ ಸರಿಯಾದ ಕನ್ನಡ ಶಿಕ್ಷಕರ ನೇಮಕಾವಾಗದೆ ಇರೋದು, ಕನ್ನಡ ಶಾಲೆ ಸರಿಯಾದ ರೀತಿಯ ನಿರ್ವಹಣೆ ಇಲ್ಲದೆ ಇರುವುದರಿಂದ ಮಕ್ಕಳಿಗೆ ನಾಡಗೀತೆಯನ್ನು ಸಹ ಹಾಡಲು ಬಾರದು ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಕಂಠಪಾಠ ಮಾಡಿದ ಮಕ್ಕಳಿಗೆ ನಾಡಗೀತೆ ಅರ್ಥ ಗೊತ್ತಿಲ್ಲ. ಗಡಿ ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ಭಾಷೆ ಅಳಿವಿನಂಚಿಗೆ ಬಂದು ನಿಲ್ಲುತ್ತೆ ಅನ್ನೋದು ಸ್ಥಳೀಯ ಕನ್ನಡಿಗರ ಆತಂಕವಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]