ಬೆಂಗಳೂರು: ರಾಜ್ಯದಲ್ಲಿ ದಿನಕ್ಕೊಂದು ಧರ್ಮ ದಂಗಲ್ ವಿವಾದ ಶುರುವಾಗುತ್ತಿದೆ. ಇದಿಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಕ್ರೈಸ್ತ ಧರ್ಮದ ಹೇರಿಕೆ ಆರೋಪ ಕೇಳಿಬಂದಿದ್ದು, ಬೈಬಲ್‍ನಲ್ಲಿ ಕ್ರೌರ್ಯ ಇದೆ. ಶಿಕ್ಷಣ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನಗರದ ರಿಚರ್ಡ್ ಟೌನ್‍ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ಮಕ್ಕಳಿಗೆ ಬೈಬಲ್ ಕಡ್ಡಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕೆರಳಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಶಿಕ್ಷಣದ ಹೆಸರಲ್ಲಿ ಮತಂತಾರ ಮಾಡುವ ಹುನ್ನಾರವಿದು. ಬೈಬಲ್‍ನಲ್ಲಿ ಕ್ರೌರ್ಯವಿದೆ. ಕೂಡಲೇ ಕ್ಲಾರೆನ್ಸ್ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ 4ನೇ ಅಲೆ: ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
Advertisement
Advertisement
ಮಕ್ಕಳ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2005ರ ಉಲ್ಲಂಘನೆ ಹಾಗೂ ಸರ್ವೋಚ್ಚ ನ್ಯಾಯಾಲಯ ಆದೇಶ ಉಲ್ಲಂಘನೆ ಮಾಡಲಾಗಿದೆ. ಶಾಲೆಯಲ್ಲಿ ಬೈಬಲ್ ಪುಸ್ತಕ ಕಡ್ಡಾಯ ಎಂದು ಆದೇಶ ಹೊರಡಿಸಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ, ಪೋಷಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳು ಉತ್ತಮ ನಾಗರಿಕನಾಗಲು ಬೈಬಲ್ ಕಲಿಕೆ ಮುಖ್ಯ ಎಂದ ಆಡಳಿತ ಮಂಡಳಿ, ಬೈಬಲ್ ಕಲಿಕೆ ವಿರೋಧಿಸುವವರಿಗೆ ಶಾಲೆಯಲ್ಲಿ ಅಡ್ಮಿಷನ್ ಮಾಡಿಕೊಳ್ಳುವುದಿಲ್ಲ. ದಿನನಿತ್ಯ ಬೈಬಲ್ ಓದುವುದು ಕಡ್ಡಾಯ ಅಂತ ಆಡಳಿತ ಮಂಡಳಿ ತಿಳಿಸಿದೆ ಎನ್ನಲಾಗುತ್ತಿದೆ.
Advertisement
ಸದ್ಯ ಈ ವಿರುದ್ಧ ಪ್ರಮೋದ್ ಮುತಾಲಿಕ್ ಬೈಬಲ್ ಓದುವುದರಿಂದ ಮತಾಂತರ ವಾದಿಗಳಾಗಿದ್ದಾರೆ. ಕ್ರಿಶ್ಚಿಯನ್ ಪ್ರಚಾರಕರಾಗಿದ್ದಾರೆ. ಗೋವಾದಲ್ಲಿ ನಿಮ್ಮ ಕ್ರೌರ್ಯ ಗೊತ್ತಾಗಿದೆ ಎಂದು ಗುಡುಗಿದ್ದಾರೆ. ಇಲ್ಲಿಯವರೆಗೂ ಹಿಂದೂ ಸಂಘಟನೆಗಳ ವಿರೋಧಕ್ಕೆ ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯಿಸಿಲ್ಲ. ಒತ್ತಾಯ ಬೈಬಲ್ ಬೋಧನೆ ನಿಲ್ಲಿಸದಿದ್ದರೆ, ಶಾಲೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಗೆ ನೀಡಿದೆ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್