‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಟಿಕೆಟ್ ಬಾಚಿಕೊಳ್ಳಲು 9 ಸ್ಪರ್ಧಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದೀಗ ಬಾಲ್ ಟಾಸ್ಕ್‌ನಲ್ಲಿ ಭವ್ಯಾ (Bhavya Gowda) ರೊಚ್ಚಿಗೆದ್ದಿದ್ದಾರೆ. ಆಟ ಆಡುವ ಭರದಲ್ಲಿ ಹನುಮಂತನ (Hanumantha) ಬೆನ್ನಿಗೆ ಭವ್ಯಾ ಬಾರಿಸಿದ್ದಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
Advertisement
ಸಾಕಷ್ಟು ಚೆಂಡುಗಳನ್ನು ಸಂಗ್ರಹಿಸಿದ್ದ ಅವರು ಒಂದಷ್ಟು ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು. ಬಟ್ಟೆಯಿಂದ ಬಾಸ್ಕೆಟ್ ಮುಚ್ಚಿಕೊಳ್ಳುವಂತಿಲ್ಲ ಎಂದು ಕ್ಯಾಪ್ಟನ್ ರಜತ್ ಹೇಳಿದರು. ಹಾಗಾಗಿ ಚೆಂಡುಗಳನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಕಷ್ಟ ಆಯಿತು. ಆ ಸಂದರ್ಭವನ್ನು ಬಳಸಿಕೊಂಡು ಹನುಮಂತ ಟಾಸ್ಕ್ ವೇಳೆ, ಭವ್ಯಾ ಸಂಗ್ರಹಿಸಿದ್ದ ಬಾಲ್ ಕಸಿಯಲು ಬಂದಿದ್ದಾರೆ. ಇದರಿಂದ ಹನುಮಂತ ಹಾಗೂ ಭವ್ಯಾ ಅವರ ಮಧ್ಯೆ ನಡೆದ ಗಲಾಟೆ ಕೈ, ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.
Advertisement
Advertisement
ಚೈತ್ರಾ, ಗೌತಮಿ, ಭವ್ಯಾ, ಧನರಾಜ್, ಹನುಮಂತ ಅವರಲ್ಲಿ ಬಾಲ್‌ಗಳನ್ನು ಬುಟ್ಟಿಗೆ ಹಾಕುವ ಹೋರಾಟ ನಡೆದಿದೆ. ಇದರಲ್ಲಿ ಪ್ರತಿಯೊಬ್ಬರು ಎದುರಾಳಿಯ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದೇ ವೇಳೆ, ಹನುಮಂತ ಅವರು ಭವ್ಯಾ ಅವರ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಹಿಡಿದು ಎಳೆಯುತ್ತಾರೆ. ಹನುಮಂತ ತನ್ನ ಬುಟ್ಟಿಗೆ ಕೈ ಹಾಕಿದ್ದಕ್ಕೆ ಸಿಟ್ಟಿಗೆದ್ದ ಸ್ಪರ್ಧಿ ಭವ್ಯಾ ಅವರ ಟಾಸ್ಕ್ನಲ್ಲಿ ಹನುಮಂತು ಅವರ ಬೆನ್ನಿನ ಮೇಲೆ ಬಾರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಮೃತ ರೇವತಿ ಪುತ್ರನನ್ನು ಭೇಟಿಯಾದ ಅಲ್ಲು ಅರ್ಜುನ್
Advertisement
ಭವ್ಯಾ ಅವರು ಹೊಡೆದಿದ್ದಕ್ಕೆ ಖಂಡಿಸಿದ ಹನುಮಂತ ಅದನ್ನ ಕ್ಯಾಪ್ಟನ್ ರಜತ್ ಅವರ ಗಮನಕ್ಕೆ ತರುತ್ತಾರೆ. ರಜತ್ ಅವರು ಭವ್ಯಾ ನೀವು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದು, ಆಟದಲ್ಲಿ ಪಾಜ್ ಕೊಡುತ್ತಾರೆ. ಇಷ್ಟಾದರೂ ಭವ್ಯಾ ಅವರು ಹನುಮಂತು ಮೇಲೆ ಕೈ ಮಾಡಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ.
ಇನ್ನೂ ಟಾಸ್ಕ್ ಮುಗಿದ ಬಳಿಕ ಭವ್ಯಾ ಹನುಮಂತನ ಬಳಿ ಹೋಗಿ ಕಾಲಿಗೆ ನಮಿಸುತ್ತಾರೆ. ತಪ್ಪಾಯ್ತು ಕ್ಷಮಿಸಿ ಬೇಕಂತ ಮಾಡಿದ್ದಲ್ಲ ಎಂದು ಹನುಮಂತನ ಬಳಿ ಭವ್ಯಾ ಕ್ಷಮೆಯಾಚಿಸಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ನಡೆಯೇನು? ಎಂದು ಕಾಯಬೇಕಿದೆ.