ಬೆಂಗಳೂರು: ರಾಜ್ಯ ಸರ್ಕಾರದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳು ಗೃಹಜ್ಯೋತಿ (Gruha Jyothi) ಜೊತೆಗೆ ವಿಲೀನವಾಗಿದೆ.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಫಲಾನುಭವಿಗಳು ಗೃಹಜ್ಯೋತಿ ಗೆ ನೋಂದಾಯಿಸಿಕೊಳ್ಳಲು ಎಸ್ಕಾಂಗಳು (ESCOM) ಮನವಿ ಮಾಡಿಕೊಂಡಿವೆ.
Advertisement
ಭಾಗ್ಯಜ್ಯೋತಿ ಕುಟೀರ ಜ್ಯೋತಿಯಲ್ಲಿ 40 ಯೂನಿಟ್ ಹಾಗೂ ಅಮೃತ ಜ್ಯೋತಿಯಲ್ಲಿ ಎಸ್‌ಟಿ, ಎಸ್‌ಸಿ (ST, SC) ಸಮುದಾಯಕ್ಕೆ 75 ಯೂನಿಟ್ ಉಚಿತ ಸ್ಕೀಮ್ ಇತ್ತು. ಈಗ ಈ ಎಲ್ಲಾ ಯೋಜನೆಗಳು ಗೃಹಜ್ಯೋತಿಯ ಜೊತೆಗೆ ವಿಲೀನಗೊಂಡಿದೆ. ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಎಫೆಕ್ಟ್ – ತಳ್ಳಾಟ, ನೂಕಾಟದಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿ
Advertisement
Advertisement
ಬೇರೆ ಸ್ಕೀಮ್‌ಗಳ ಪ್ರಯೋಜನವನ್ನು ಪಡೆಯುತ್ತಿರುವ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.
Advertisement
ರಾಜ್ಯ ಸರ್ಕಾರದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳು ಗೃಹಜ್ಯೋತಿ ಜೊತೆಗೆ ವಿಲೀನವಾಗಿದೆ.