ಬೆಂಗಳೂರಲ್ಲಿ ತ್ರಿಬಲ್‌ ಮರ್ಡರ್‌ ಕೇಸ್‌ – ಎರಡನೇ ಪತ್ನಿ, ಮಲ ಮಗಳ ಮೇಲೆ ಅಕ್ರಮ ಸಂಬಂಧ ಅನುಮಾನ

Public TV
2 Min Read
Bengaluru Murder

– ಹೆಸರಘಟ್ಟ ಸಂತೆಯಲ್ಲಿ ಮಚ್ಚು ತಂದು ಒಬ್ಬೊಬ್ಬರನ್ನೇ ಕೊಂದ ಪಾತಕಿ

ಬೆಂಗಳೂರು: ಆತ ಪತ್ನಿಯನ್ನ ಬಿಟ್ಟಿದ್ದ, ಈಕೆ ಮದುವೆಗೆ ಬಂದಿದ್ದ ಮಗಳ ಜೊತೆ ಗಂಡನನ್ನ ಬಿಟ್ಟು ಈತನ ಜೊತೆ ಸೇರಿದ್ದಳು. ಸಹಜೀವನ ನಡೆಸುತ್ತಿರುವಾಗಲೇ ಎರಡನೇ ಪತ್ನಿಗೆ ಅಕ್ರಮ ಸಂಬಂಧವಿದೆ ಎನ್ನುವ ಅನುಮಾನದ ಭೂತ ಆತನಿಗೆ ಕಾಡುತ್ತಿತ್ತು. ಜೊತೆಗೆ ಮಲ ಮಗಳ ಮೇಲೂ ಅನುಮಾನ. ಇದು ಬೆಂಗಳೂರಲ್ಲಿ (Bengaluru) ತ್ರಿಬಲ್‌ ಮರ್ಡರ್‌ಗೆ ಕಾರಣವಾಯಿತು.

ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿಬಲ್ ಮರ್ಡರ್ ತನಿಖೆಯಲ್ಲಿ ಕೊಲೆಯ ಹಿಂದಿನ ಅಸಲಿ ಸತ್ಯ ಹೊರಬಿದ್ದಿದೆ. ಪೊಲೀಸರಿಗೆ ಶರಣಾಗತಿಯಾಗಿದ್ದ ಆರೋಪಿ ಗಂಗರಾಜುನನ್ನ ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಇದೇ ವೇಳೆ ಕೆಲ ಅಚ್ಚರಿ ವಿಚಾರಗಳು ಬೆಳಕಿಗೆ ಬಂದಿವೆ. ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ಡಿವೋರ್ಸ್ ಪಡೆಯದೇ ಭಾಗ್ಯಮ್ಮ ಮತ್ತು ಗಂಗರಾಜು ಲಿವಿಂಗ್ ಇನ್‌ ರಿಲೇಷನ್‌ನಲ್ಲಿದ್ದರು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ದರೂ ಕೂಡಾ ಸಹ ಜೀವನಕ್ಕೆ ಆರೋಪಿ ಒಪ್ಪಿದ್ದ. ಆದರೆ, ಇತ್ತೀಚೆಗೆ ಭಾಗ್ಯಮ್ಮ ಸೇರಿ ಮಲ ಮಗಳ ಮೇಲೂ ಸಾಕಷ್ಟು ಅನುಮಾನಪಡುತ್ತಿದ್ದ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಮಲತಂದೆಯೇ ಅನುಮಾನ ವ್ಯಕ್ತಪಡಿಸಿದ್ದ. ಇದನ್ನೂ ಓದಿ: ಬೆಂಗಳೂರು| ಕೌಟುಂಬಿಕ ಕಲಹ – ಮಚ್ಚಿನಿಂದ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ಪತಿ

crime 1

ಇತ್ತೀಚೆಗೆ ಮನೆಗೆ ಬಂದಿದ್ದ ಮೃತ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ನಿನ್ನೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ‌ ಹೆಸರಘಟ್ಟಗೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ಮಚ್ಚು ಖರೀದಿ‌ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನ 500 ರೂ. ಕೊಟ್ಟು ನೇರವಾಗಿ ಮನೆಗೆ ತಂದಿದ್ದ. ಮೂವರನ್ನ ಕೊಲೆ ಮಾಡಿ ಶರಣಾಗತಿಗೆ ಪ್ಲ್ಯಾನ್‌ ಕೂಡಾ ಮಾಡಿಕೊಂಡಿದ್ದ. ಪತ್ನಿ ಮನೆಯಲ್ಲಿ ಇಲ್ಲದ್ದನ್ನ ಮೊದಲೇ ತಿಳಿದು ಒಬ್ಬೊಬ್ಬರನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದನಂತೆ. ಮನೆಗೆ ಬರ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಮೊದಲ ಮಲ ಮಗಳಾದ ನವ್ಯಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚೇಟು ಬಿದ್ದಿದ್ದು, ಇಬ್ಬರ ರುಂಡ ಮುಂಡ ಬೇರ್ಪಡಿಸಿ ಬಿಸಾಡಿದ್ದಾನೆ.

ಇಷ್ಟಲ್ಲದೆ ಮನೆಯಲ್ಲೇ ಇಬ್ಬರನ್ನ ಕೊಂದು ಮನೆಯಲ್ಲಿ ಪತ್ನಿಗಾಗಿ ಬಾಗಿಲ ಹಿಂದೆ ಆರೋಪಿ ಗಂಗರಾಜು ಕಾಯುತ್ತಿದ್ದ. ಆ ಬಳಿಕ ಪತ್ನಿ ಮನೆಗೆ ಬಂದಿದ್ದು, ರಕ್ತದ ಮಡುವಿನಲ್ಲಿದ್ದ ಮಗಳನ್ನ ನೋಡಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಪತ್ನಿಯ ಮೇಲೂ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಆರು ವರ್ಷಗಳಿಂದ ಮೃತಳ ಜೊತೆಗೆ ಆರೋಪಿ ಇರೋದು ತಿಳಿದು ಬಂದಿದೆ. ಆದರೆ, ಆಕೆಯ ಮೇಲಿನ ಅನುಮಾನವೇ ಮೂವರ ಕೊಲೆಗೆ ಕಾರಣವಾಗಿದ್ದು ದುರಂತ. ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆ!

Share This Article