– ಸಿಸಿಟಿವಿ ಆಧರಿಸಿ ನಾಲ್ವರ ಬಂಧನ
ಬೆಂಗಳೂರು: ಟೆಮೆಟೋ (Tomato) ತುಂಬಿದ್ದ ಬೊಲೆರೋ ವಾಹನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು (Police) ಬಂಧಿಸಿದ್ದಾರೆ.
Advertisement
ಆರೋಪಿಗಳು ಬೆಂಗಳೂರಲ್ಲಿ (Bengaluru) ವಾಹನವನ್ನು ಕದ್ದು ಬಳಿಕ ಟೊಮೆಟೋವನ್ನು ಚೆನ್ನೈಗೆ ಸಾಗಿಸಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ವಾಹನವನ್ನು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು. ಕಳೆದ 11 ದಿನಗಳಿಂದಲೂ ಈ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು
Advertisement
Advertisement
ಇದೇ ತಿಂಗಳ 10 ರಂದು ರೈತರು ಚಿತ್ರದುರ್ಗದಿಂದ ಆರ್‍ಎಂಸಿ ಯಾರ್ಡ್‍ಗೆ ಟೊಮೆಟೋ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೋ ಹೊತ್ತೊಯ್ದಿದ್ದರು.
Advertisement
ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು. ಟೊಮೆಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‍ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‍ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್‍ಲೈನ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಾಹನವನ್ನು ಕದ್ದೊಯ್ದಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ
Web Stories