ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬುದಾಗಿ ದೃಢಪಡುತ್ತಿದ್ದಂತೆಯೇ ಇತ್ತ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಕೂಡ ತುಪ್ಪದ ಹುಡುಗಿ ವಿರುದ್ಧ ಸಾಕ್ಷ್ಯ ಹೇಳಿದ್ದಾರೆ.
ನಟಿ ರಾಗಿಣಿ ಮಾದಕ ದ್ರವ್ಯ ಸೇವನೆ ಮಾಡ್ತಿದ್ದರು. ತಾವು ಮಾದಕ ದ್ರವ್ಯ ಸೇವನೆ ಮಾಡಿ ಬೇರೆಯವರಿಗೂ ಪ್ರಚೋದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರ ಎದುರು ಅಕುಲ್ ಬಾಲಾಜಿ ಸಾಕ್ಷ್ಯ ನುಡಿದಿದ್ದಾರೆ. ರಾಗಿಣಿ ವಿರುದ್ಧ ಆಕೆಯ ಡ್ರೈವರ್ ಇಮ್ರಾನ್ ಸೇರಿ ಸುಮಾರು 19 ಮಂದಿಯಿಂದ ಈಗಾಗಲೇ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ.
Advertisement
Advertisement
ರಾಗಿಣಿ ವಿರುದ್ಧ ಸಾಕ್ಷ್ಯಗಳು..!
ಡ್ರಗ್ಸ್ ಖರೀದಿಗೆ ಬಗ್ಗೆ ರಾಗಿಣಿ ವಾಟ್ಸಾಪ್ ಚ್ಯಾಟ್ ಮಾಡಿದ್ದರು. ಇಂಥ ದಿನ, ಇಂಥ ಸ್ಥಳಕ್ಕೆ ಇಷ್ಟು ಡ್ರಗ್ಸ್ ಬೇಕು ಎಂದು ಡ್ರಗ್ಸ್ ದಂಧೆಕೋರರ ಜೊತೆಗೆ ಚಾಟ್ ಮಾಡಿದ್ದರು. ಅಲ್ಲದೆ ಡ್ರಗ್ಸ್ ಸರಬರಾಜು, ಡಗ್ಸ್ ಸಂಬಂಧಿ ಕಾನೂನುಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ಕೂಡ ನಡೆಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ಕೋರ್ಟಿಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
Advertisement
Advertisement
ಇಷ್ಟು ಮಾತ್ರವಲ್ಲದೆ ಮಾದಕ ದ್ರವ್ಯ ಖರೀದಿಗಾಗಿ 49 ಬಾರಿ ರಾಗಿಣಿ ಕರೆ ಮಾಡಿದ್ದರು. ಅದರಲ್ಲಿ ಗೆಳೆಯ ರವಿಶಂಕರ್‍ಗೆ 16 ಬಾರಿ ಕರೆ ಮಾಡಿದ್ದರು. ಆದಿತ್ಯ ಆಳ್ವ, ಲೂಮ್ ಪೆಪ್ಪರ್ ಸಾಂಬಾ, ಇಮ್ರಾನ್‍ಗೆ ನಟಿ ಕಾಲ್ ಮಾಡಿದ್ದರು. ಈ ಮೂಲಕ ಕೊಕೇನ್, ಎಂಡಿಎಂಎ, ಎಕ್ಸ್‍ಟೆಸಿ ಮಾತ್ರೆ ತರಿಸಿಕೊಂಡಿದ್ದರು. ಇದನ್ನೂ ಓದಿ: ಮೂಗಿನಲ್ಲಿ ಕೊಕೇನ್ ಸೇವಿಸುತ್ತಿದ್ದ ನಟಿ ರಾಗಿಣಿ!
ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್‍ನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವೆನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು ಎಂಬುದಾಗಿ ಕೋರ್ಟಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ.
ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ. ಸದ್ಯ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.