ಬೆಂಗಳೂರು ಗ್ರಾಮಾಂತರ: ಪಾಕಿಸ್ತಾನದವರ (Pakistan) ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( 28 ) ಬಂಧಿತ ಆರೋಪಿ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಇದನ್ನೂ ಓದಿ: 2 ಲಕ್ಷ ಲಂಚ ಪಡೆಯುವಾಗ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಆರೋಪಿ ಸಂರ್ಪಕದಲ್ಲಿದ್ದ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್‌ನ ಇನ್ಸ್ಟಾಗ್ರಾಂ ಅಕೌಂಟ್. ಗಣ್ಯ ವ್ಯಕ್ತಿಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪಾಕಿಸ್ತಾನಿ ಗ್ಯಾಂಗ್ ಇದಾಗಿದೆ. ಇನ್ಸ್ಟಾಗ್ರಾಂನ Hammadmemon333 ಅನ್ನೋ ಪಾಕಿಸ್ತಾನ್ ಗ್ಯಾಂಗ್‌ನ ಅಕೌಂಟ್‌ನಲ್ಲಿ ಆರೋಪಿ ಸಂಪರ್ಕದಲ್ಲಿದ್ದ.
ತನ್ನ ಆಧಾರ್ ಕಾರ್ಡ್ ಎಲ್ಲ ಕೊಟ್ಟು ಅಕೌಂಟ್‌ಗೆ ಲಾಗಿನ್ ಆಗಿದ್ದ. ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ನ ಜೊತೆ ಇನ್ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಐಎಎಸ್ ಅಧಿಕಾರಿ ನಾಪತ್ತೆ
ಆರೋಪಿಯು ಎಸಿ ರಿಪೇರಿ ಕೆಲಸ ಮಾಡುತ್ತಾ ಬೆಂಗಳೂರಿನ ಮಸೀದಿಯಲ್ಲಿ ಪಾಠ ಮಾಡುತ್ತಿದ್ದ. ಗ್ಯಾಂಗ್ ಹೇಳಿದಂತೆ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದ. ಆರೋಪಿಯ ವಿರುದ್ಧ ಬಿಎನ್‌ಎಸ್ 113 (3) ( 197( 2 ) ಅಡಿ ಪ್ರಕರಣ ದಾಖಲಾಗಿದೆ.

