ಬೆಂಗಳೂರು: ನಗರದಲ್ಲಿ ಕುಂಬಳಗೋಡು ಪೊಲೀಸರು (Kumbalgodu Police) ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.
ಕೇರಳ ಮತ್ತು ಒಡಿಶಾ ರಾಜ್ಯದಿಂದ ಬೆಂಗಳೂರಿಗೆ (Bengaluru) ಬರ್ತಿದ್ದ ಸುಮಾರು 1.70 ಕೋಟಿ ರೂ. ಮೌಲ್ಯದ 317 ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಆರೋಪಿಗಳಾದ ಚಾಂದ್ ಪಾಷ, ವಿಷ್ಣುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ‘108’ ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ: ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ
ಇಬ್ಬರು ಆರೋಪಿಗಳು ಕಾರಿನ ಸೀಟ್ಗಳಲ್ಲಿ ಗಾಂಜಾವನ್ನು ಆಡಗಿಸಿ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಕುಂಬಳಗೋಡು ಪೊಲೀಸರು, ಕಾರನ್ನು ಅಡ್ಡಗಟ್ಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಕಾರಿನ ಎಲ್ಲಾ ಸೀಟ್ಗಳು, ಕಾರಿನ ಇತರೆ ಭಾಗಗಳಲ್ಲಿ ಗಾಂಜಾ ಅಡಗಿಸಿ ತಂದಿರುವುದು ಪತ್ತೆಯಾಗಿದೆ. ಈ ಮೂಲಕ ಕೇರಳ, ಒಡಿಶಾದಿಂದ ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ನಗರಕ್ಕೆ ಸಾಗಾಟ ಮಾಡ್ತಿರೋದು ಗೊತ್ತಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಮಾಡೆಲ್ ಗೆಳತಿಯಿಂದ ಬ್ಲ್ಯಾಕ್ಮೇಲ್? – ಫ್ಲ್ಯಾಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಉದ್ಯಮಿ ಸಾವು

