ಮಂಡ್ಯ: ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ (Mandya) ರೈತರು ಇಂದು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ (Protest) ಕೈಗೊಂಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಇಂದು ಭಾರಿ ಹೈಡ್ರಾಮಾ ನಡೆದಿದೆ. ಟನ್ ಕಬ್ಬಿಗೆ 5,500 ಬೆಲೆ ನೀಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರೈತ ಸಂಘದ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಿಂದಾಗಿ ಇಡೀ ಹೈವೆ ಬಂದ್ ಆಗಿ, ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ 1,000ಕ್ಕೂ ಹೆಚ್ಚು ಪೊಲೀಸರು ಸರ್ಪಗಾವಲು ಹಾಕಿದ್ದರೂ, ರೈತರ ಆಕ್ರೋಶದ ಮುಂದೆ ಪೊಲೀಸರ ಹರಸಾಹಸ ಪ್ರಯೋಜನಕ್ಕೆ ಬರಲಿಲ್ಲ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಕೈಮೀರಿತು. ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ನೇರವಾಗಿ ಗಣಂಗೂರು ಟೋಲ್ ಬಳಿಯ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ.ಇದನ್ನೂ ಓದಿ: ಆಯೋಗದ ಅಧಿಕಾರಿ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪ – RTI ನಲ್ಲಿ ಬಹಿರಂಗ
ಸಚಿವರು ಬರುತ್ತಿದ್ದಂತೆ ರೈತರು ಹಸಿರು ಟವಲ್ ಬೀಸಿ, ಕಬ್ಬಿನ ಬೆಲೆ ಏರಿಕೆ, ಸಾಲಮನ್ನಾ ಮಾಡುವಂತೆ ಸಕ್ಕರೆ ಕಾರ್ಖಾನೆಗಳ ತೂಕದ ವಂಚನೆ ನಿಲ್ಲಬೇಕು ಮತ್ತು ಈ ಬಾರಿ ಶಾಶ್ವತ ಪರಿಹಾರ ಸಿಗುವವರೆಗೂ ಮನೆಗೆ ಹೋಗಲ್ಲ ಎಂದು ಅನ್ನದಾತರು ಪಟ್ಟು ಹಿಡಿದು ಕುಳಿತಿದ್ದಾರೆ.ಇದನ್ನೂ ಓದಿ: ಇಡ್ಲಿಯಲ್ಲಿ ದತ್ತೂರ ಬೀಜದ ಪುಡಿ ಬೆರೆಸಿ ಪತಿ ಕೊಲೆ: ಪತ್ನಿ, ಪ್ರಿಯಕರ ಅರೆಸ್ಟ್
