ಬೆಂಗಳೂರು: ಮ್ಯಾನ್ ಹೋಲ್‍ಗೆ ಕಾರ್ಮಿಕರು ಇಳಿದು ಕೆಲಸ ಮಾಡಬಾರದು, ಯಾಂತ್ರಿಕವಾಗಿ ಕೆಲಸ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕಾರ್ಮಿಕರನ್ನು ಇದೇ ರೀತಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
ಇದೇ ರೀತಿ ಇಂದು ಬೆಂಗಳೂರಿನಲ್ಲಿ ಒಬ್ಬ ಕಾರ್ಮಿಕ ಮ್ಯಾನ್ ಹೋಲ್ ಕ್ಲೀನ್ ಮಾಡುವುದಕ್ಕೆ ಹೋಗಿ ಸಾವನ್ನಪ್ಪಿದ್ರೆ ಮತ್ತೋರ್ವ ಆಸ್ಪತ್ರೆಯ ಪಾಲಾಗಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್‍ನ ಗಣೇಶ್ ಬಾಗ್‍ನ ಜಾಗದಲ್ಲಿ ಮೂವತ್ತು ಅಡಿಯ ಮ್ಯಾನ್ ಹೋಲ್ ಅನ್ನು ಸ್ವಚ್ಛಗೊಳಿಸಲೆಂದು ಪೌರಕಾರ್ಮಿಕರು ಮ್ಯಾನ್‍ಹೋಲ್ ಒಳಗೆ ಇಳಿದಿದ್ದಾರೆ. ಆದರೆ ಅದು 30 ಅಡಿಗಳಷ್ಟು ಆಳ ಇದ್ದಿದ್ರಿಂದ ಓರ್ವ ಪೌರಕಾರ್ಮಿಕ ಮ್ಯಾನ್‍ಹೋಲ್ ಒಳಗೆ ಮೃತಪಟ್ಟಿದ್ದರೆ, ಇನ್ನೋರ್ವ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಬಾವಿಯ ಒಳಗೆ ಹೆಚ್ಚಿನ ಗಾಳಿ ಬಾರದ ಹಿನ್ನೆಲೆಯಲ್ಲಿ ಸಾವನ್ನಪ್ಪರಬಹುದು ಎನ್ನುವ ಅಂಶ ಬೆಳಕಿಗೆ ಬಂದಿದ್ದು, ಕೆಲಸಕ್ಕೆ ಅಂತ ಕರೆತಂದಿದ್ದ ಗುತ್ತಿಗೆದಾರನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.