ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ (Rented House) ಪಡೆಯುವವರು ಹುಷಾರಾಗಿರಬೇಕು ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ. ಲಕ್ಷ ಲಕ್ಷ ಹಣ ಅಡ್ವಾನ್ಸ್ ಪಡೆದಿದ್ದ ಮನೆ ಮಾಲೀಕ (Owner) ನಾಪತ್ತೆ ಆಗಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.
ಬಿಲ್ಡಿಂಗ್ ಮಾಲೀಕರಾದ ಸೈಯದ್ ಇತ್ನೈನ್, ಸೈಯದ್ ಅಬ್ಬಾಸ್ ಎಸ್ಕೇಪ್ ಆದ ಮಾಲೀಕರು. ಆರ್.ಟಿ ನಗರದಲ್ಲಿ 3 ಕುಟುಂಬಗಳು, 10 ಲಕ್ಷ, 15 ಲಕ್ಷ, 12 ಲಕ್ಷ ಅಡ್ವಾನ್ಸ್ ಕೊಟ್ಟು ಲೀಸ್‍ಗೆ ಮನೆಯಲ್ಲಿದ್ದಾರೆ. ಈ 3 ಕುಟುಂಬಗಳು ಕಳೆದ ನಾಲ್ಕೈದು ವರ್ಷಗಳಿಂದ ಲೀಸ್‍ಗೆ ಇದ್ದಾರೆ. ಆದರೆ ಮನೆ ಮಾಲೀಕರು ಮಾತ್ರ ಎಲ್‍ಐಸಿ ಫೈನಾನ್ಸ್‌ನಲ್ಲಿ, ಈ ಬಿಲ್ಡಿಂಗ್ ಮೇಲೆ ಸಾಲ ಪಡೆದು, ಫೈನಾನ್ಸ್ ಅವರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.
Advertisement
Advertisement
ಇದೀಗ ಮನೆಗೆ ನೋಟಿಸ್ ಕೊಟ್ಟಿರುವ ಫೈನಾನ್ಸ್ ಕಂಪನಿ, ಹಣ ಕಟ್ಟದಿದ್ದರೇ ಬಿಲ್ಡಿಂಗ್‍ನ ವಶಪಡಿಸಿಕೊಳ್ಳುದಾಗಿ ಎಚ್ಚರಿಸಿದ್ದಾರೆ. ಇದರಿಂದ ಬಾಡಿಗೆದಾರರು ಹೆದರಿದ್ದು, ನಾವು ಅಡ್ವಾನ್ಸ್ ಹಣ ಕೊಟ್ಟು, ಬೀದಿಗೆ ಬರಬೇಕಾಗುತ್ತದೆ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ
Advertisement
Advertisement
ಸದ್ಯ ಸಾಲ ಸೂಲ ಮಾಡಿ, ಲಕ್ಷ ಲಕ್ಷ ಹಣ ಅಡ್ವಾನ್ಸ್ ಕೊಟ್ಟವರು ಇದೀಗ ಕಣ್ಣೀರು ಹಾಕುತ್ತಿದ್ದು, ಫೈನಾನ್ಸ್‌ನವರು ನಮ್ಮನ್ನ ಮನೆಯಿಂದ ಹೊರ ಹಾಕಿದರೇ, ನಮ್ ಗತಿ ಏನ್ ಅಂತ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಮನೆ ಮಾಲೀಕರ ವಿರುದ್ಧ ಬಾಡಿಗೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k