ಬೆಂಗಳೂರು: ಜಯನಗರ ಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 2,889 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅನುಕಂಪದ ಆಧಾರದಿಂದ ಟಿಕೆಟ್ ಪಡೆದಿದ್ದ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಜನ ಸೋಲಿಸಿದ್ದಾರೆ. ಈ ಮೂಲಕ ಮತ್ತೆ ತಂದೆಯ ಕ್ಷೇತ್ರದಲ್ಲಿ ಮಗಳು ಸೌಮ್ಯಾ ರೆಡ್ಡಿ ಗೆಲುವಿನ ಸವಿಯನ್ನು ಕಂಡಿದ್ದಾರೆ.
ಬೆಳಗ್ಗೆ 11.45: ಎಲ್ಲ 16 ಸುತ್ತು ಮುಕ್ತಾಯಗೊಂಡಿದ್ದು, ಸೌಮ್ಯಾ ರೆಡ್ಡಿಗೆ 54,457 ಮತಗಳು ಬಿದ್ದರೆ, ಬಿಜೆಪಿ ಪ್ರಹ್ಲಾದ್ ಬಾಬು 51,568 ಮತಗಳು ಬಿದ್ದಿದೆ.
Advertisement
ಬೆಳಗ್ಗೆ 11.23: ಸೌಮ್ಯ ರೆಡ್ಡಿಗೆ 15 ಸುತ್ತಿನಲ್ಲಿ 6,562 ಮತಗಳ ಮುನ್ನಡೆ. ಕಾಂಗ್ರೆಸ್ 51,347 ಬಿಜೆಪಿ 44,785
Advertisement
ಬೆಳಗ್ಗೆ 11.09: 14ನೇ ಸುತ್ತಿನಲ್ಲಿ ಕಾಂಗ್ರೆಸ್ 51,192 ಬಿಜೆಪಿಗೆ 44,292 ಮತಗಳು ಬಿದ್ದಿವೆ. 6,900 ಮತಗಳ ಮುನ್ನಡೆ ಪಡೆದ ಸೌಮ್ಯಾ ರೆಡ್ಡಿ
Advertisement
ಬೆಳಗ್ಗೆ 10.57: 13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 48,456, ಬಿಜೆಪಿ- 39,919 ಕಾಂಗ್ರೆಸ್ ಗೆ 8,537 ಮತಗಳ ಭಾರೀ ಮುನ್ನಡೆ
Advertisement
ಬೆಳಗ್ಗೆ 10.49: 12ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 45,975, ಬಿಜೆಪಿ- 35,798, ಕಾಂಗ್ರೆಸ್ ಗೆ 10,000 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.39: 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 43,478 ಬಿಜೆಪಿ- 30,748 , ಕಾಂಗ್ರೆಸ್ ಗೆ 12,730 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.31: 10ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 40,677, ಬಿಜೆಪಿ- 25,779, ಕಾಂಗ್ರೆಸ್ ಗೆ 14,838 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.21- 9ನೇ ಸುತ್ತಿನಲ್ಲೂ ಕಾಂಗ್ರೆಸ್ ಕಾಂಗ್ರೆಸ್ – 37,288, ಬಿಜೆಪಿ-21,943,ಕಾಂಗ್ರೆಸ್ ಗೆ 15, 345 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.15 -8ನೇ ಸುತ್ತು ಕಾಂಗ್ರೆಸ್ 31,642, ಬಿಜೆಪಿಗೆ 21,437 ಮತ. 10,256 ಮತಗಳ ಮುನ್ನಡೆ ಗಳಿಸಿದ ಸೌಮ್ಯಾ ರೆಡ್ಡಿ
ಬೆಳಗ್ಗೆ 10.02- 7ನೇ ಸುತ್ತಿನ ಮತ ಎಣಿಕೆ ಅಂತ್ಯ . ಕಾಂಗ್ರೆಸ್ 27,197, ಬಿಜೆಪಿ 19,873. ಸೌಮ್ಯಾ ರೆಡ್ಡಿಗೆ 7,324 ಮತಗಳ ಮುನ್ನಡೆ
ಬೆಳಗ್ಗೆ 9.54 – 6ನೇ ಸುತ್ತು – ಕಾಂಗ್ರೆಸ್ 22,356, ಬಿಜೆಪಿ 18,813. 3543 ಮತಗಳ ಮುನ್ನಡೆ ಕಾಯ್ದಕೊಂಡ ಸೌಮ್ಯಾ ರೆಡ್ಡಿ
ಬೆಳಗ್ಗೆ 9.43 – ಐದನೇ ಸುತ್ತು ಕಾಂಗ್ರೆಸ್ 17,923, ಬಿಜೆಪಿ 16,331. ಸೌಮ್ಯಾ ರೆಡ್ಡಿಗೆ 1532 ಮತಗಳ ಮುನ್ನಡೆ
ಬೆಳಗ್ಗೆ 9.30 -ನಾಲ್ಕನೇಯ ಸುತ್ತಿನಲ್ಲಿ ಕಾಂಗ್ರೆಸ್ 16,438, ಬಿಜೆಪಿ 11,141 ಮತಗಳು. 5,2297 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ
ಬೆಳಗ್ಗೆ 9.22– ಮೂರನೇ ಸುತ್ತು – ಕಾಂಗ್ರೆಸ್ 11,494, ಬಿಜೆಪಿಗೆ 8566 ಮತಗಳು. 2,928 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ
ಬೆಳಗ್ಗೆ 9.10 – ಎರಡನೇ ಸುತ್ತು – ಕಾಂಗ್ರೆಸ್ 6,719 ಬಿಜೆಪಿಗೆ 6,453 ಮತಗಳು. 266 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ ಸೌಮ್ಯಾ ರೆಡ್ಡಿ
ಬೆಳಗ್ಗೆ 8.45 – ಮೊದಲ ಸುತ್ತಿನ ಎಣಿಕೆಯಲ್ಲಿ ಕಾಂಗ್ರೆಸ್ಸಿಗೆ 3,749, ಬಿಜೆಪಿಗೆ 3,322 ಮತ. ಸೌಮ್ಯ ರೆಡ್ಡಿ 427 ಮತಗಳಿಂದ ಮುನ್ನಡೆ.
ಬೆಳಗ್ಗೆ 8.00 – ಅಂಚೆ ಮತದಾನದ ಎಣಿಕೆ ಆರಂಭ. ಒಟ್ಟು ನಾಲ್ಕು ಮತಗಳಲ್ಲಿ 3 ಬಿಜೆಪಿಗೆ, 1 ಮತ ಕಾಂಗ್ರೆಸ್ಸಿಗೆ ಬಿದ್ದಿದೆ.
ಬೆಳಗ್ಗೆ 7:10 – 2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.
ಬೆಳಗ್ಗೆ 7 ಗಂಟೆ -ಎಸ್‍ಎಸ್‍ಆರ್‍ವಿ ಕಾಲೇಜಿನಲ್ಲಿ 7.30ಕ್ಕೆ ಸ್ಟ್ರಾಂಗ್ ರೂಮ್ ಓಪನ್. 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್‍ಐ, 27 ಎಎಸ್‍ಐ, 42 ಮುಖ್ಯ ಪೇದೆ, 120 ಪೊಲೀಸ್ ಪೇದೆ ನಿಯೋಜನೆ. ಅಹಿತಕರ ಘಟನೆ ತಡೆಯಲು 2 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.