ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಗ್ನ ದಿನವನ್ನು ಆಚರಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಒಂದು ವಾರಗಳ ಹಿಂದೆ ಜುಲೈ 14 ರಂದು ಬೆಂಗಳೂರಿನ ಸರ್ಜಾಪುರದಲ್ಲಿ ಜಮಾಯಿಸಿದ ನಗ್ನವಾದಿಗಳ ಗುಂಪು ನಗ್ನ ದಿನವನ್ನು ಆಚರಿಸಿದೆ.
ಒಂದೆಡೆ ಜಮಾಯಿಸಿದ ನಗ್ನವಾದಿಗಳು, ತಾವೇ ಸಾಮಾನ್ಯ ಅಡುಗೆ ಮಾಡಿ ಊಟ ಮಾಡಿದ್ದಾರೆ. ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಶಿಕ್ಷಕರು, ವೈದ್ಯರು, ಉದ್ಯಮಿಗಳು ಸೇರಿದಂತೆ ಸುಮಾರು 20 ರಿಂದ 50 ವರ್ಷದ ವರೆಗಿನ ಟೆಕ್ಕಿಗಳು ನಗ್ನ ದಿನದಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್ – ಎಲ್ಲಾ 6 ತಂಡಗಳು ಐಪಿಎಲ್ ಫ್ರಾಂಚೈಸಿ ಪಾಲು
ಇದರಲ್ಲಿ ಅನೇಕ ದಂಪತಿಯೂ ಇದ್ದರು. ಆಗಾಗ್ಗೆ ಸದಸ್ಯರು ತಮ್ಮ ರಹಸ್ಯ ಟೆಲಿಗ್ರಾಂ ಗುಂಪಿನಲ್ಲಿ ಮಾಹಿತಿ ಹಂಚಿಕೊಂಡು ಸಭೆ ಸೇರುತ್ತಾರೆ. ದೇಶದ ಕಾನೂನುಗಳು ಹೊರಾಂಗಣದಲ್ಲಿ ನಗ್ನತೆ ಪ್ರದರ್ಶನ ಮಾಡುವುದನ್ನು ನಿಷೇಧಿಸುವುದಿಂದ ಇದರ ಸದಸ್ಯತ್ವವನ್ನು ಈಗ ನಿಲ್ಲಿಸಲಾಗಿದೆ. ಇದನ್ನೂ ಓದಿ: ಸಮಂತಾ ಡಿವೋರ್ಸ್ ಕೊಡಲು ಕಾರಣ ಯಾರು? ಕರಣ್ ಶೋನಲ್ಲಿ ಬಹಿರಂಗ
ಕಾರ್ಯಕ್ರಮದ ಸಂಯೋಜಕಿ ಹಾಗೂ ಉದ್ಯಮಿಯೂ ಆಗಿರುವ ಪೂಜಾ ಈ ದಿನವನ್ನಾಚರಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ಚರ್ಮವು ಉಸಿರಾಡಲು ಸಾಧ್ಯವಾಗುತ್ತದೆ ಎಂಬುದು ತಿಳಿದಾಗ ಅದು ಸುಂದರ ಜೈವನಶೈಲಿ ಎಂದೆನಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಉದ್ಯಮಿ ಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸಮಾನ ಮನಸ್ಕರನ್ನು ಸಂಪರ್ಕಿಸುವ ಮೂಲಕ ನಗ್ನತೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ತಮ್ಮದೇ ಗುಂಪನ್ನು ರಚಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್ ಹೌಸ್
ಅಲ್ಲದೆ `2015ರಲ್ಲಿ ಮಹಿಳಾ ಸ್ನೇಹಿತೆಯೊಬ್ಬರು ನನಗೆ ನಗ್ನತೆಯ ಜೀವನ ಶೈಲಿಯನ್ನು ಪರಿಚಯಿಸಿದರು. ನಂತರ ನಾನು ಪುರುಷರು ಹಾಗೂ ಮಹಿಳೆಯರು ಒಟ್ಟಿಗೇ ಸೇರುವ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದೆ. ಅಲ್ಲಿಂದ ಅಶ್ಲೀಲ ನೋಟಗಳನ್ನು ತೆಗೆದುಹಾಕುವುದು ಹೇಗೆ ಎಂಬುದು ಅರ್ಥವಾಯಿತು. ಇದು ವಿಮೋಚನೆಯ ಹಾದಿಯೂ ಹೌದು ಎಂದೂ ಅವರು ಹೇಳಿಕೊಂಡಿದ್ದಾರೆ.
ನ್ಯೂಡಿಸಂ ಒಂದು ಭಾವೋದ್ರಿಕ್ತ ಜೀವನ ಆಯ್ಕೆಯಾಗಿದೆ. ಅನೇಕರು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಮ್ಮ ಟೆಲಿಗ್ರಾಂ ಗುಂಪಿನಲ್ಲೂ ಬಟ್ಟೆಯಿಲ್ಲದ ಜೀವನ ಶೈಲಿಯ ಬಗ್ಗೆ ಚರ್ಚೆಗಳನ್ನು ನಡೆಸುತ್ತೇವೆ. ಆದರೆ ಇದರಲ್ಲಿ ಲೈಂಗಿಕ ದೃಷ್ಟಿಕೋನ ಅಥವಾ ಲೈಂಗಿಕತೆಯ ಸಂಪರ್ಕ ಇರುವುದಿಲ್ಲ ಎಂದು ಹೇಳಿದ್ದಾರೆ.
ನಗ್ನ ದಿನದ ವಿಶೇಷತೆ ಏನು?
ಪ್ರತಿ ವರ್ಷ ಜುಲೈ 14ರಂದು ರಾಷ್ಟ್ರೀಯ ನಗ್ನದಿನವನ್ನು ಆಚರಿಸಲಾಗುತ್ತದೆ. ನ್ಯೂಜಿಲೆಂಡ್‌ನಿಂದ ಆರಂಭವಾದ ಈ ಆಚರಣೆ ಪಾಶ್ಚಿಮಾತ್ಯ ದೇಶಗಳಿಗೆ ಹರಡಿತು. ಈ ದಿನದಂದು ತಮ್ಮ ಬಟ್ಟೆಗಳನ್ನು ತೆಗೆದುಹಾಕುತ್ತಾರೆ. ಅನೇಕರು ಇದನ್ನು ವಿಕೃತ ಕಲ್ಪನೆ ಅಂದುಕೊಳ್ಳುತ್ತಾರೆ. ಆದರೆ ಈ ದಿನವು ಮಾನವನ ದೇಹ ಸೌಂದರ್ಯದ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಈ ಪರಿಕಲ್ಪನೆಗೆ ಮೀಸಲಾದ ಸಂಪೂರ್ಣ ಚಳವಳಿಯೂ ಇದೆ. ಇದನ್ನು ನ್ಯಾಚುರಿಸಂ ಅಥವಾ ನಗ್ನತೆ ಎಂದು ಕರೆಯಲಾಗುತ್ತದೆ.