CricketLatestMain PostSports

ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

Advertisements

ಜೋಹಾನ್ಸ್‌ಬರ್ಗ್‌: ಕ್ರಿಕೆಟ್ ದಕ್ಷಿಣ ಆಫ್ರಿಕಾದ ಚೊಚ್ಚಲ ಟಿ20 ಲೀಗ್‌ನಲ್ಲಿ ಎಲ್ಲಾ ಆರು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಖರೀದಿಸಿವೆ.

ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರು ಹರಾಜಿನ ಸಮಯದಲ್ಲಿ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಫ್ರಾಂಚೈಸಿಯನ್ನು ಖರೀದಿಸಿದರೆ, ಸನ್ ರೈಸರ್ಸ್ ಮಾಲೀಕತ್ವದ ಸನ್ ಟಿವಿ ಗ್ರೂಪ್ ಪೋರ್ಟ್ ಎಲಿಜಬೆತ್ ಫ್ರಾಂಚೈಸಿಯನ್ನು ಖರೀದಿ ಮಾಡಿದೆ.

ಕಳೆದ ವರ್ಷಾಂತ್ಯದಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯನ್ನು 7090 ಕೋಟಿ ರೂ. ನೀಡಿ ಖರೀದಿಸಿದ್ದ ಆರ್‌ಪಿ ಸಂಜೀವ್ ಗೋಯೆಂಕಾ ಡರ್ಬನ್ ತಂಡವನ್ನು ಖರೀದಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪಾರ್ಲ್ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರಾಗಿರುವ ಜಿಂದಾಲ್ ಸೌತ್ ವೆಸ್ಟ್ ಸ್ಪೋರ್ಟ್ಸ್ ಪ್ರಿಟೋರಿಯಾವನ್ನು ಖರೀದಿಸಿದೆ.  ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಬೆನ್‌ ಸ್ಟೋಕ್ಸ್‌ ನಿವೃತ್ತಿ ಘೋಷಣೆ 

ಐಪಿಎಲ್‌ನ ಕೋಲ್ಕತಾ ಸೇರಿದಂತೆ 4 ವಿವಿಧ ಟಿ20 ಲೀಗ್‌ನ ತಂಡದ ಒಡೆತನ ಹೊಂದಿರುವ ನೈಟ್ ರೈಡರ್ಸ್‌ ಸಂಸ್ಥೆ ಹಾಗೂ ರಾಯಲ್ ಚಾಲೆ೦ಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಲೀಗ್‌ನಲ್ಲಿ ಯಾವುದೇ ತಂಡವನ್ನು ಖರೀದಿಸಿಲ್ಲ. ದ.ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್‌ ಲೀಗ್‌ ಆಯುಕ್ತರಾಗಿ ನೇಮಕಗೊಂಡಿದ್ದು, ಲೀಗ್‌ನ ವೇಳಾಪಟ್ಟಿ, ಮಾದರಿ ಪ್ರಕಟವಾಗಬೇಕಿದೆ.

ಈ ಮೊದಲು 2 ಬಾರಿ ದಕ್ಷಿಣ ಆಫ್ರಿಕಾ ಟಿ20 ಲೀಗ್ ಆರಂಭಿಸಿತ್ತು. ಈ ಮೊದಲು 2017ರಲ್ಲಿ ಗ್ಲೋಬಲ್ 20 ಲೀಗ್‌ ಆರಂಭಿಸಿತ್ತು. ಬಳಿಕ ಮಾಡಿ ಸೂಪರ್ ಲೀಗ್ ಶುರು ಮಾಡಿದ್ದರೂ ಪ್ರಸಾರ ಹಕ್ಕು ಪಡೆಯಲು ಯಾವುದೇ ಸಂಸ್ಥೆಗಳು ಬರದ ಕಾರಣ ಆ ಲೀಗ್ ಕೂಡಾ ನಡೆದಿರಲಿಲ್ಲ.

Live Tv

Leave a Reply

Your email address will not be published.

Back to top button