ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ(Addanda C Cariappa) ರಚಿಸಿದ ಟಿಪ್ಪು ನಿಜ ಕನಸುಗಳು(Tipu Nija Kanasugalu) ಪುಸ್ತಕ ಮಾರಾಟಕ್ಕೆ ಸಿಟಿ ಸಿವಿಲ್ ಕೋರ್ಟ್(City Civil Court) ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.
ಟಿಪ್ಪು ನಾಟಕ (Drama) ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ. ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
Advertisement
Advertisement
ಪುಸ್ತಕವು ಕೋಮು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಪುಸ್ತಕ ಸುಳ್ಳುಗಳಿಂದ ತುಂಬಿದೆ. ಲೇಖಕರು ಹೇಳಿದ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ
Advertisement
ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಹೀಗಾಗಿ ಎಲ್ಲಿಯೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಬೆಂಗಳೂರು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫೀಉಲ್ಲಾ ಅರ್ಜಿಯಲ್ಲಿ ಮನವಿ ಮಾಡಿದ್ದರು.
Advertisement
ಈ ಅರ್ಜಿಯನ್ನು ಪುರಸ್ಕರಿಸಿದ 15ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾ. ಜೆ ಆರ್ ಮೆಂಡೋನ್ಸಾ ಪುಸ್ತಕ ಮಾರಾಟಕ್ಕೆ ತಡೆ ನೀಡಿದ್ದಾರೆ. ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ ಮತ್ತು ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ಆದೇಶ ನೀಡಲಾಗಿದೆ.