70 ಜನರನ್ನು ಕೆಲಸದಿಂದ ತೆಗೆದು – 67 ಮಂದಿಗೆ ಬೇರೆ ಕಡೆ ಕೆಲಸ ಸಿಗಲು ಸಹಾಯ ಮಾಡಿದ ಬೆಂಗ್ಳೂರು ಕಂಪನಿ ಸಿಇಒ!

Public TV
1 Min Read
Harsh Pokharna

– ಸಾಮಾಜಿಕ ಜಾಲತಾಣಗಳಲ್ಲಿ ಸಿಇಒ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಬೆಂಗಳೂರು: ನಗರದ (Bengaluru) ಕಂಪನಿಯೊಂದರ ಸಿಇಒ ಒಬ್ಬರು ತಮ್ಮ 70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿ, ನಂತರ ಅವರಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

18 ತಿಂಗಳ ಹಿಂದೆ ಓಕೆ ಕ್ರೆಡಿಟ್‌ನ (OkCredit) ಸಿಇಒ ಮತ್ತು ಸಂಸ್ಥಾಪಕ ಹರ್ಷ್ ಪೋಖರ್ಣ (Harsh Pokharna) ಅವರು ಬಜೆಟ್ ಮಿತಿಯಿಂದಾಗಿ ಕಂಪನಿಯ 70 ಕಾರ್ಮಿಕರನ್ನು ವಜಾಗೊಳಿಸಿದ್ದರು. ವಜಾಗೊಳಿಸಿದ ನಂತರ, ಕಂಪನಿಯು 70 ಉದ್ಯೋಗಿಗಳಲ್ಲಿ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ ವಜಾಗೊಳಿಸಿದ್ದರ ಬಗ್ಗೆ ಮನವರಿಕೆ ಮಾಡಿ, ಅವರಿಗೆ ಬೇರೆಡೆ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. 3 ತಿಂಗಳ ನೋಟಿಸ್ ಅವಧಿ ಮುಗಿಯುವ ಮೊದಲು 67 ಜನರನ್ನು ನೇಮಿಸಲಾಗಿದೆ. ಉದ್ಯೋಗ ಸ್ವೀಕರಿಸದ ಮೂವರಿಗೆ, ನಾವು ಎರಡು ತಿಂಗಳ ಹೆಚ್ಚುವರಿ ಸಂಬಳವನ್ನು ನೀಡಿದ್ದೇವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿವಿಧ ಕಂಪನಿಗಳಲ್ಲಿ ಈ ವರ್ಷ 120,000 ಕ್ಕೂ ಹೆಚ್ಚು ಜನರನ್ನು ವಜಾಗೊಳಿಸಲಾಗಿದೆ. ಅವರಲ್ಲಿ ಹಲವರಿಗೆ ಕರೆ ಕೂಡ ಬಂದಿಲ್ಲ. ಕೆಲವರು ನಿರ್ಬಂಧಿಸಿದ ಇಮೇಲ್ ಮೂಲಕ ಆ ಮಾಹಿತಿ ನೀಡಲಾಗಿದೆ. ಕೆಲವರನ್ನು ದಿನದ ಮಧ್ಯದಲ್ಲಿ ತೆಗೆದುಹಾಕಲಾಯಿತು. ಅದು ಅಮಾನವೀಯ. ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಗಳು ಸಂಭವಿಸುತ್ತವೆ. ಆದರೆ ನೀವು ಅದನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮ್ಮ ಸಂಸ್ಕೃತಿಯ ಬಗ್ಗೆ ಹೇಳುತ್ತದೆ. ಈ ಮಾತು ಹೇಳುವುದು ಕಷ್ಟ ಎಂದು ನನಗೆ ತಿಳಿದಿದೆ. ನೀವು ಒಂದು ಸಂಸ್ಥೆಯ ಸಂಸ್ಥಾಪಕರಾಗಿದ್ದರೆ, ಯಾರನ್ನಾದರೂ ಬಿಡುವ ಸಂದರ್ಭ ಬಂದಾಗ ಅವರನ್ನು ಕುಟುಂಬದವರಂತೆ ನೋಡಿಕೊಳ್ಳಿ ಎಂದು ಅವರು ಬರೆದಿದ್ದಾರೆ.

ಹರ್ಷ್ ಪೋಖರ್ಣ ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಅವರ ಉತ್ತಮ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಕಾರ್ಮಿಕರನ್ನು ವಜಾಗೊಳಿಸಿದ ಬಳಿಕ, ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಉದ್ಯೋಗ ಒದಗಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ. ಹೆಚ್ಚಿನ ನಾಯಕರು ಈ ಮಾದರಿಯನ್ನು ಅನುಸರಿಸಬೇಕು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

Share This Article