ಬೆಂಗಳೂರು: ಸೋಮವಾರ ಬೆಂಗಳೂರು ಭಾಗಶಃ ಬಂದ್ ಆಗುವ ಸಂಭವ ಇದೆ. ಕಾರಣ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದೆ.
ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ ಶುರುವಾಗಿದೆ, ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ರಸ್ತೆಗೆ ಇಳಿಯಲ್ಲ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಒಕ್ಕೂಟ ಆಯೋಜಿಸಿದೆ. ಬಂದ್ ಯಶಸ್ಸಿಗಾಗಿ ಒಕ್ಕೂಟ ಪಣತೊಟ್ಟಿದೆ. ಇದನ್ನೂ ಓದಿ: ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ
Advertisement
Advertisement
ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ 250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರ ಪರಿಣಾಮ ಬೆಂಗಳೂರು ಜನಜೀವನದ ಮೇಲೆ ಸ್ವಲ್ಪ ಮಟ್ಟಿಗೆ ಬೀರುವ ಸಂಭವ ಇದೆ. ಇದನ್ನೂ ಓದಿ: ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ
Advertisement
Advertisement
ಏನೆಲ್ಲಾ ಇರಲ್ಲ?: ಆಟೋ, ಖಾಸಗಿ ಟ್ಯಾಕ್ಸಿ, ಏರ್‌ಪೋರ್ಟ್ ಟ್ಯಾಕ್ಸಿ, ಶಾಲೆಗಳ ಖಾಸಗಿ ವಾಹನ, ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನ ಇರಲ್ಲ.
ಖಾಸಗಿ ಬಸ್ ಎಫೆಕ್ಟ್ ಎಲ್ಲಿ?: ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಖಾಸಗಿ ಬಸ್ ಎಫೆಕ್ಟ್ ಬೀಳಲಿದೆ.
Web Stories