ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮುಗಿದಿದ್ದು 63ನೇ ಸಿವಿಲ್ ನ್ಯಾಯಾಲಯ ಮಾರ್ಚ್ 2ಕ್ಕೆ ತೀರ್ಪು ಕಾಯ್ದಿರಿಸಿದೆ.
ಇಂದು ಆರೋಪಿಗಳ ಪರ ವಾದ ಮಡಿಸಿದ ಹಿರಿಯ ವಕೀಲ ಬಾಲನ್ ಅವರು, ನಮ್ಮ ಕಕ್ಷೀದಾರರದ ಅರುಣ್ ಬಾಬು ಮತ್ತು ಇತರರ ಮೇಲೆ ಹಾಕಿರುವ ಎಲ್ಲಾ ಕೇಸ್‍ಗಳು ಒತ್ತಡ ಪೂರಿತವಾಗಿದೆ. ಹೀಗಾಗಿ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದರು.
Advertisement
Advertisement
ವಕೀಲ ಬಾಲನ್ ಅವರ ವಾದ: ಆರೋಪಿಗಳು ನಲಪಾಡ್‍ಗೆ ಪರಿಚಯಸ್ಥರು ಅನ್ನುವ ಕಾರಣಕ್ಕೆ ಇವರನ್ನು ಬಂಧಿಸಲಾಗಿದೆ. ರೆಸ್ಟೋರೆಂಟ್‍ನ ಯಾವುದೇ ಸಿಬ್ಬಂದಿ ಆರೋಪಿಗಳ ಹೆಸರು ಹೇಳಿಲ್ಲ. ಅರುಣ್ ಬಾಬು ಒಬ್ಬ ಮುಗ್ಧ ಹುಡುಗ. ವಿದ್ವತ್ ಕಾಲು ಮುರಿದಿತ್ತು ಎಂದು ಹೇಳಿದ್ದಾರೆ. ಏಕೆ ವಿದ್ವತ್ ಕಾಲ ಮುರಿದಿದೆ ಎಂದು ಕೋರ್ಟ್ ಗೆ ತಿಳಿಸಿಲ್ಲ. ವಿದ್ವತ್ ಚೆನ್ನಾಗಿಯೇ ಇದ್ದಾನೆ. ವೈದ್ಯರು ಆತನ ಆರೋಗ್ಯದ ಮಾಹಿತಿಯನ್ನ ಮುಚ್ಚಿಡುತ್ತಿದ್ದಾರೆ. ಹತ್ತರಿಂದ ಹದಿನೈದು ಜನ ಹೊಡೆದಿದ್ದಾರೆ ಎಂದು ಹೇಳುತ್ತಾರೆ. ಆದರೆ ಹೊಡೆದ ಆ ಹತ್ತರಿಂದ ಹದಿನೈದು ಜನ ಯಾರು ಎಂದು ಪ್ರಶ್ನಿಸಿದರು.
Advertisement
ಯುಬಿಸಿಟಿಯ ಸಿಸಿಟಿವಿ ದೃಶ್ಯ ಮಾತ್ರ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಎರಡು ಎಫ್‍ಐಆರ್ ದಾಖಲಿಸಿದ್ದಾರೆ. ಎರಡು ಎಫ್‍ಐಆರ್ ದಾಖಲು ಮಾಡಿದ್ದು ಯಾಕೆ? ವಿದ್ವತ್ ನೀಡಿದ ದೂರಿನ ತನಿಖೆ ನಡೆಯುತ್ತಿದೆ. ಆದರೆ ಅರುಣ್ ಬಾಬು ನೀಡಿರುವ ದೂರಿನ ತನಿಖೆ ಮಾತ್ರ ನಡೆಯುತ್ತಿಲ್ಲ. ಇಲ್ಲಿ ಒಂದೇ ಪ್ರಕರಣಕ್ಕೆ ಹೆಚ್ಚು ಮಹತ್ವ ನೀಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ವಾದಿಸಿದರು.
Advertisement
ಹಿರಿಯ ವಕೀಲ ಟಾಮಿ ಸೆಬಾಸ್ಟಿನ್ ವಾದ: ವಿಶೇಷ ಅಭಿಯೋಜಕರಾಗಿರುವ ಶ್ಯಾಮ್ ಸುಂದರ್ ಗೆ ಜೀವ ಬೆದರಿಕೆ ಹಾಕುವಂತ ಕೇಸ್ ಅಲ್ಲ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು ಪೊಲೀಸರ ತನಿಖೆಗೆ ಲಭ್ಯರಾಗಿದ್ದಾರೆ. ಹೀಗಾಗಿ ಷರತ್ತುಬದ್ಧ ಜಾಮೀನು ನೀಡಬೇಕು. ಇದು ಜಾಮೀನು ನಿರಾಕರಿಸುವಂತಹ ಪ್ರಕರಣವೇ ಅಲ್ಲ ಎಂದರು.
ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ವಾದ: ಕಬ್ಬನ್ ಪಾರ್ಕ್ ಪೋಲೀಸರು ಹಲ್ಲೆ ಮಾಡಿದವನ ರಕ್ಷಣೆ ನಿಂತಿದ್ದರು. ಹೊಡೆತ ತಿಂದವನ ಹೇಳಿಕೆ ಪಡೆಯುವುದನ್ನ ಬಿಟ್ಟು ಆತ ಕುಡಿದಿದ್ದಾನೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಲು ಹೇಳುತ್ತಾರೆ. ಇದು ಆರೋಪಿಗಳ ರಕ್ಷಣೆ ಮಾಡುವ ಉದ್ದೇಶವಲ್ಲ ಅಲ್ಲವೇ? ವಿದ್ವತ್ ಮೇಲೆ ದೂರು ದುರುದ್ದೇಶದಿಂದ ನೀಡಿದ್ದಾರೆ. ವಿದ್ವತ್ ಕುಡಿದಿದ್ದ ಎಂದು ದೂರಿನಲ್ಲಿ ಇದೆ. ಆದರೆ ಮಲ್ಯ ವೈದ್ಯಕೀಯ ದಾಖಲೆಗಳು ವಿದ್ವತ್ ಕುಡಿದಿಲ್ಲ ಎಂದು ತಿಳಿಸಿದ್ದಾರೆ. ಆರೋಪಿಯು ನಾನು ಕಿಂಗ್ ನಲಪಾಡ್ ನನ್ನ ವಿರುದ್ಧ ಯಾರು ಮಾತನಾಡೋ ಹಾಗೆ ಇಲ್ಲ. ಮಾತಾಡಿದ್ರೆ ಅವರ ಕಥೆ ಮುಗಿಸುತ್ತೇನೆ ಎನ್ನುವ ಉದ್ದೇಶವನ್ನು ಇಟ್ಟುಕೊಂಡಿದ್ದ. ಇಲ್ಲಿ ಇದ್ದದ್ದು ಇದೆ ಪ್ರೇರಣೆ. ಹೀಗಾಗಿ 307 ಸೆಕ್ಷನ್(ಕೊಲೆ ಯತ್ನ) ಹಾಕಲಾಗಿದೆ ಎಂದು ವಾದಿಸಿದರು.