LatestLeading NewsMain PostNational

ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಫ್ಲಾಟ್‍ನಲ್ಲಿ ಮತ್ತೆ ಕೋಟ್ಯಂತರ ನಗದು ಪತ್ತೆಯಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅರ್ಪಿತಾ ಮುಖರ್ಜಿ ಸಂಬಂಧಿಸಿದ ಬೆಲ್‍ಘಾರಿಯಾ ಟೌನ್ ಕ್ಲಬ್‍ನಲ್ಲಿರುವ ಫ್ಲಾಟ್‍ನಲ್ಲಿ 50 ಕೋಟಿ ರೂ. ಮತ್ತು 5 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಇಡಿ ಅಧಿಕಾರಿಗಳು ಬೆಲ್‍ಘಾರಿಯಾ ಟೌನ್ ಕ್ಲಬ್‍ನಲ್ಲಿರುವ ಅರ್ಪಿತಾ ಅವರ ಫ್ಲಾಟ್‍ಅನ್ನು ಪರಿಶೀಲಿಸುವಾಗ ಶೆಲ್ಫ್‌ನಲ್ಲಿ ನೋಟುಗಳ ಕಂತೆ ಪತ್ತೆಯಾಗಿದೆ. ನೋಟ್ ಎಣಿಕೆ ಯಂತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ ಅಧಿಕಾರಿಗಳು ಈವರೆಗೆ ಎಣಿಸಲಾದ ಹಣಗಳ ಪ್ರಮಾಣವೇ 50 ಕೋಟಿ ರೂ. ಗಳಾಗಿದ್ದು, ಇನ್ನೂ ನಗದು ಎಣಿಕಾ ಪ್ರಕ್ರಿಯೆ ಮುಂದುವರಿದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ ಅಲ್ಲಾಹುಗಾಗಿ ಎಲ್ಲದಕ್ಕೂ ಸಿದ್ಧ – ಪಾಕ್‍ಗೆ ತೆರಳಲು ಸಿದ್ಧರಾಗಿದ್ರು ಶಂಕಿತ ಉಗ್ರರು

ಬೆಲ್‍ಘಾರಿಯಾದ ರತ್ತಲಾ ಪ್ರದೇಶದಲ್ಲಿ ಎರಡು ಫ್ಲಾಟ್‍ಗಳಲ್ಲಿ ಹಣವಿದೆ ಎಂದು ಹೇಳಲಾಗಿದ್ದ ರೂಮ್‌ನ ಬಾಗಿಲಿಗೆ ಬೀಗ ಹಾಕಲಾಗಿತ್ತು. ಈ ಬೀಗ ತೆರೆಯಲು ಸಾಧ್ಯವಾಗದೇ ಇದ್ದಾಗ ಇಡಿ ಅಧಿಕಾರಿಗಳು ರೂಮ್‌ನ ಬೀಗ ಒಡೆದು ಪ್ರವೇಶಿಸಿದ್ದಾರೆ. ಈ ವೇಳೆ ರೂಮ್‍ನಲ್ಲಿ ಅಡಗಿಸಿಡಲಾಗಿದ್ದ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಹಣವನ್ನು ಎಣಿಸಲು ಮೂರು ನೋಟು ಎಣಿಕೆ ಯಂತ್ರಗಳನ್ನು ತರಿಸಿದ್ದಾರೆ. ದಾಳಿ ವೇಳೆ ಫ್ಲಾಟ್‍ಗಳಲ್ಲಿ ಹಲವಾರು ಪ್ರಮುಖ ದಾಖಲೆಗಳು ಸಹ ವಶಕ್ಕೆ ಪಡೆದಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ. ಇದನ್ನೂ ಓದಿ: ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ

ಇತ್ತೀಚೆಗೆ ಇಡಿ ಶಿಕ್ಷಕರ ಅಕ್ರಮ ನೇಮಕಾತಿಯ ಆರೋಪದ ಅಡಿಯಲ್ಲಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮನೆಯಲ್ಲಿ ತನಿಖೆ ನಡೆಸಿತ್ತು. ಚಟರ್ಜಿಯವರ ಆಪ್ತೆ ಅರ್ಪಿತಾ ಮನೆಯಲ್ಲೂ ಇಡಿ ತನಿಖೆ ನಡೆಸಿ, ಸುಮಾರು 21 ಕೋಟಿ ರೂ. ಮೊತ್ತದ ಹಣವನ್ನು ಬಯಲಿಗೆ ತಂದಿತ್ತು. ಆ ಬಳಿಕ ಇದೀಗ ಎರಡನೇ ಬಾರಿ ಇಡಿ ದಾಳಿ ನಡೆಸಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

ನಿನ್ನೆ ಇಡಿ ತನಿಖೆಗೆ ಒಳಪಟ್ಟ ಬಳಿಕ ಅರ್ಪಿತಾ ಮುಖರ್ಜಿ ಈ ಹಣ ಚಟರ್ಜಿ ಅವರಿಗೆ ಸೇರಿದ್ದಾಗಿ ತಿಳಿಸಿದ್ದು, ಈ ಹಣವನ್ನು ತನಗೆ ಸಂಬಂಧಿಸಿದ ಕಂಪನಿಯಲ್ಲಿ ತುಂಬಿಸಬೇಕಾಗಿತ್ತು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ಅರ್ಪಿತಾ ವಿಚಾರಣೆಯ ಸಂದರ್ಭ ಇಡಿ ರೇಡ್‍ಗೂ ಮುನ್ನ 1-2 ದಿನಗಳಲ್ಲಿ ತನ್ನ ಮನೆಯಲ್ಲಿದ್ದ ಹಣದ ರಾಶಿಯನ್ನು ಸ್ಥಳಾಂತರಿಸುವ ಯೋಜನೆ ಮಾಡಿದ್ದಾಗಿ ಬಹಿರಂಗಪಡಿಸಿದ್ದರು.

Live Tv

Leave a Reply

Your email address will not be published.

Back to top button