ಕೋಲ್ಕತ್ತಾ: ಶಾಲಾ ಸೇವಾ ಆಯೋಗದ(ಎಸ್‍ಎಸ್‍ಸಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ನಾಯಿಗಳಿಗೂ ಫ್ಲಾಟ್ ಹೊಂದಿದ್ದಾರೆಂದು ವರದಿಯಾಗಿದೆ.
ಪಾರ್ಥ ಅವರು ಸಾಕಿದ ನಾಯಿಗೂ ಹವಾ ನಿಯಂತ್ರಿತ ಫ್ಲ್ಯಾಟ್ ಒದಗಿಸಿದ್ದರು. ದಕ್ಷಿಣ ಕೋಲ್ಕತ್ತಾದ ನಕ್ತಾಲಾ ಬಳಿ ಪಾರ್ಥ ಅವರು ಐಷಾರಾಮಿ ಫ್ಲ್ಯಾಟ್ ಹೊಂದಿದ್ದು, ಇದನ್ನು ಕೇವಲ ನಾಯಿಗಳಿಗಾಗಿಯೇ ಮೀಸಲಿಟ್ಟಿದ್ದರು. ಅವರು 3 ಸಾಕುನಾಯಿಗಳನ್ನು ಸಾಕುತ್ತಿದ್ದು, ಅವುಗಳನ್ನು ‘ಸಿದ್ಧಿ ಎನ್‍ಕ್ಲೇವ್’ನ 2ನೇ ಮಹಡಿಯಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ
ನಾಯಿಗಳನ್ನು ತಂಪಾಗಿಡಲು ಏರ್ ಕಂಡಿಷನರ್ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಇದಲ್ಲದೆ, ಪಾರ್ಥ ಅವರು ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮಹಿಳೆ ಸೇರಿದಂತೆ 2 ಕೇರ್‌ಟೇಕರ್‌ಗಳನ್ನು ಸಹ ನೇಮಿಸಿಕೊಂಡಿದ್ದಾರೆ. ಫ್ಲ್ಯಾಟ್ ನಲ್ಲಿ ಮೊದಲು ನಾಲ್ಕು ನಾಯಿಗಳಿದ್ದವು. ಆದರೆ ಸ್ವಲ್ಪ ವರ್ಷಗಳ ಹಿಂದೆ ಒಂದು ನಾಯಿ ಮೃತ ಪಟ್ಟಿದ್ದು, ಈಗ ಮೂರು ನಾಯಿಗಳಿವೆ.
ಪಾರ್ಥ ಅವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಶಿಕ್ಷಕ ನೇಮಕಾತಿ ಪರೀಕ್ಷೆಯ ಪ್ರವೇಶ ನೇಮಕಾತಿ ಪತ್ರ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ. ಗ್ರೂಪ್ ಸಿ ಮತ್ತು 2 ನೇಮಕಾತಿಗೆ ಸಂಬಂಧಿಸಿದ ದಾಖಲಾತಿಗಳು, ಅಭ್ಯರ್ಥಿಗಳ ಪತ್ರ ಸೇರಿ ಹಲವು ದಾಖಲೆಗಳನ್ನು ವಾರ್ಥ ಅವರ ಮನೆಯಲ್ಲೇ ಮಾಡಿಸಿಕೊಳ್ಳಲಾಗಿದೆ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಪತ್ತೆಯಾದ ಹಣ ಪಾರ್ಥ ಚಟರ್ಜಿಯವರದ್ದೇ – ತಪ್ಪೊಪ್ಪಿಕೊಂಡ ಆಪ್ತೆ ಅರ್ಪಿತಾ