ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ ಅಲ್ಲಾಹುಗಾಗಿ ಎಲ್ಲದಕ್ಕೂ ಸಿದ್ಧ – ಪಾಕ್‍ಗೆ ತೆರಳಲು ಸಿದ್ಧರಾಗಿದ್ರು ಶಂಕಿತ ಉಗ್ರರು

ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕ ಇಬ್ಬರು ಶಂಕಿತರ ಬಳಿ ಅಲ್ ಖೈದಾ ಮಧ್ಯವರ್ತಿ ನಡೆಸಿರೋ ಸಂಭಾಷಣೆ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.
ಶಂಕಿತ ಉಗ್ರರಾದ ಅಕ್ತರ್ ಹುಸೇನ್ ಮತ್ತು ಜುಭಾ ಜೊತೆ ಬಂಗಾಳಿ ಭಾಷೆಯಲ್ಲಿ ಅಲ್ ಖೈದಾ ಮಧ್ಯವರ್ತಿ ಒಬ್ಬ ಚಾಟ್ ನಡೆಸಿದ್ದಾನೆ. ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ. ಅಲ್ಲಾಹುಗಾಗಿ ನೀವು ಎಲ್ಲದಕ್ಕೂ ಸಿದ್ಧರಿರಬೇಕು ಅಂತಾ ಯುವಕರ ತಲೆ ಕೆಡಿಸಿದ್ದ ಇದನ್ನು ಯುವಕರು ನಂಬಿದ್ದಾರೆ. ದುಬೈಗೆ ಬಂದು ಆಫ್ಘಾನಿಸ್ಥಾನಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಿದ್ದ. ಇದಕ್ಕಾಗಿ 2 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ಮಧ್ಯವರ್ತಿ ಸೂಚಿಸಿದ್ದ. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನ ಗಡಿಯೊಳಗೆ ಕರೆಸಿಕೊಳ್ಳುವುದಾಗಿ ಹೇಳಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಕುರಾನ್ ಗ್ರಂಥವನ್ನೇ ತಿರುಚಿ ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರಚೋದನೆ – ಬಯಲಾಯಿತು ಅಲ್ ಖೈದಾ ಪ್ಲಾನ್
ಮುಂದಿನ ವಾರದಲ್ಲಿ ಶಂಕಿತರು ಕಾಶ್ಮೀರಕ್ಕೆ ಹೊರಡಲು ಸಜ್ಜಾಗಿದ್ರು ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಶಂಕಿತರ ಜೊತೆ ಬಂಗಾಳಿ ಭಾಷೆಯಲ್ಲಿ ಚಾಟ್ ನಡೆಸಿದ ಅಲ್ ಖೈದಾ ಮಧ್ಯವರ್ತಿ ಬಾಂಗ್ಲಾ ದೇಶದವನೆಂದು ಗುರುತಿಸಲಾಗಿದೆ. ಇದನ್ನೂ ಓದಿ: ರಕ್ತದೋಕುಳಿಯ ಸ್ವಾಗತ ನಮಗೆ ಬೇಡ – ಜನೋತ್ಸವ ಕಾರ್ಯಕ್ರಮಕ್ಕೆ ಬರಲ್ಲ
ಧರ್ಮಗ್ರಂಥಗಳ ಬಗ್ಗೆ ಅರಿವಿರದ ಯುವಕರಿಗೆ ಕುರಾನ್‍ನ ತಿರುಚಿದ ಪ್ರತಿ ನೀಡಿ ಪ್ರಚೋದನೆ ನೀಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳ ಬಳಿ ತಿರುಚಿದ ಕುರಾನ್‍ನ ಕೆಲ ಪೇಜ್‍ಗಳು ಪತ್ತೆಯಾಗಿವೆ. ಅಲ್ ಖೈದಾ ಮಧ್ಯವರ್ತಿ ಕಳುಹಿಸಿರುವ ದಾಖಲೆಗಳಿದ್ದು, ಜಿಹಾದ್, ಕೊಲ್ಲುವುದು, ಷರಿಯತ್ ಕಾನೂನು ಎಲ್ಲವನ್ನು ಸೇರಿಸಲಾಗಿದೆ. ಪವಿತ್ರ ಗ್ರಂಥವನ್ನು ತಿರುಚಿದನ್ನೇ ಕುರಾನ್ ಎಂದು ನಂಬಿರುವ ಶಂಕಿತರು, ಕುರಾನ್ ಅನ್ವಯವಾಗಿ ಬದುಕಬೇಕು. ಅಲ್ಲಾನಿಗೋಸ್ಕರ ಜಿಹಾದ್ ಮಾಡಬೇಕು ಎಂಬುದನ್ನು ನಂಬಿದ್ದರು ಎಂಬ ಸತ್ಯ ತನಿಖೆಯಲ್ಲಿ ತಿಳಿದುಬಂದಿದೆ.
Live Tv