ಬೆಳಗಾವಿ: ಆರ್‌ಎಸ್‌ಎಸ್ ಸಮಾಜದ ಪರವಾಗಿ ಕೆಲಸ ಮಾಡುತ್ತದೆ. ಆ ಸಂಘಟನೆ ಮಾಡುವುದೆಲ್ಲ ಒಳ್ಳೆಯದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
Advertisement
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಮಸೂದೆ ಅನುಮೋದನೆ ಆಗಿದೆ. ಸದನದಲ್ಲಿ ಇಂದು ಬಹಳಷ್ಟು ಚರ್ಚೆಗಳು ಆಗಿದೆ. ಆಮಿಷಕ್ಕೆ ಒಳಗಾಗಿ ಮತಾಂತರ ಆಗಬಾರದು ಅಂತಾ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಆಗಬೇಕು ಅಂತಾ ಮಸೂದೆ ಪಾಸ್ ಮಾಡಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್
Advertisement
Advertisement
ಈ ಕಾಯ್ದೆ ಸಮಾಜಕ್ಕೆ ಒಳ್ಳೆಯದಾಗುವಂತದ್ದು. ಕಾಯ್ದೆ ಜಾರಿ ಮಾಡಿದ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಬರುತ್ತೆ. ವಿರೋಧ ಪಕ್ಷ ಮಾಡಿದ್ದರೆ ಅವರಿಗೆ ಕ್ರೆಡಿಟ್ ಹೋಗುತ್ತಿತ್ತು. ಅವರು ಪಾರದರ್ಶಕವಾಗಿದೆ ಅಂತಾ ಬೆಂಬಲ ನೀಡಿದರೆ ಕಾಂಗ್ರೆಸ್ ನವರಿಗೆ ಕ್ರೆಡಿಟ್ ಬರತ್ತಿತ್ತು ಇತ್ತು. ಹಿಡನ್ ಅಜೆಂಡಾ ಏನು ಇಲ್ಲ. ಗೋಹತ್ಯೆ ನಿಷೇಧ ಸಂವಿಧಾನದಲ್ಲೇ ಇದೆ. ಮತಾಂತರ ನಿಷೇಧ ಸಂವಿಧಾನದಲ್ಲೇ ಇದೆ ಎಂದು ಹೇಳಿದರು. ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ