CricketLatestMain PostSports

ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

ನವದೆಹಲಿ: ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದದ ಕುರಿತು ಅನೇಕರು ಪರಿಹಾರಕ್ಕೆ ಸಲಹೆಗಳನ್ನು ಕೊಡುತ್ತಿದ್ದಾರೆ. ಈ ವಿವಾದದ ಕುರಿತು ಪಾಕಿಸ್ತಾನದ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

                                           

ಆಟಗಾರರು ಹಾಗೂ ಕ್ರಿಕೆಟ್ ಮಂಡಳಿಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಮುಖಾಮುಖಿಯಾಗಿ ಮಾತನಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

2021 ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಹಾಗೆಯೇ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕತ್ವದಲ್ಲಿ ಮುಂದುವರಿದು ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ಕೊಹ್ಲಿ ಸ್ಪಷ್ಟ ಪಡಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಟಿ20 ತಂಡದ ನಾಯಕತ್ವ ತ್ಯಜಿಸುವಾಗ ಯಾರೂ ನನ್ನ ಬಳಿ ಮಾತನಾಡಿರಲಿಲ್ಲ ಎಂದು ಹೇಳುವ ಮೂಲಕ ಗಂಗೂಲಿಗೆ ಟಾಂಗ್ ಕೊಟ್ಟಿದ್ದರು.

ಈ ವಿಚಾರವಾಗಿ ಶಾಹೀದ್ ಅಫ್ರಿದಿ ನೀವು ಈ ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದೆ ಮಾತನಾಡಿದರೆ ಸಮಸ್ಯೆಯಾಗುತ್ತದೆ. ಮುಖಾಮುಖಿ ಮಾತನಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ, ಇದನ್ನು ಅನಗತ್ಯವಾಗಿ ಕೆದಕುತ್ತಿದ್ದರೆ ಪರಿಹಾರ ಸಿಗುವುದಿಲ್ಲ. ಮಂಡಳಿ ಹಾಗೂ ಆಟಗಾರರ ನಡುವೆ ಯಾವುದೇ ಸಂವಹನದ ಅಂತರವಿರಬಾರದು ಎಂದು ಶಾಹೀದ್ ಅಫ್ರಿದಿ ಹೇಳುವ ಮೂಲಕ ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

Leave a Reply

Your email address will not be published.

Back to top button