Wednesday, 18th July 2018

Recent News

ಬಿಗ್ ಬಾಸ್ ನಲ್ಲಿ ಅವಕಾಶಕ್ಕಾಗಿ ಸೈಕಲ್ ನಲ್ಲೇ ಬೆಂಗ್ಳೂರಿಗೆ ಬರ್ತಿದ್ದಾನೆ ಬೆಳಗಾವಿ ಯುವಕ!

ಧಾರವಾಡ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಅವಕಾಶ ಕೊಡಿ ಎಂದು ಜಿಲ್ಲೆಯ ಯುವಕನೊಬ್ಬ ಬೆಂಗಳೂರಿಗೆ ಸೈಕಲ್ ಪ್ರಯಾಣ ಬೆಳೆಸಿದ್ದಾನೆ.

ಹೌದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುಡಲಗಿ ಪಟ್ಟಣದ ಮಂಜುನಾಥ ರೆಳೆಕರ ಭಾನುವಾರ ಸೈಕಲ್ ನಲ್ಲಿ ತನ್ನ ಪ್ರಯಾಣ ಆರಂಭ ಮಾಡಿದ್ದು, ಇಂದು ಧಾರವಾಡಕ್ಕೆ ಬಂದು ತಲುಪಿದ್ದಾರೆ.

ಮಂಜುನಾಥ ಬೆಂಗಳೂರಿಗೆ ಬಂದು ನಟ ಸುದೀಪ್ ಅವರನ್ನು ಭೇಟಿ ಮಾಡಿ ತನಗೂ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದಾರೆ. ಹೀಗಾಗಿ 6 ದಿನಗಳಲ್ಲಿ ಬೆಂಗಳೂರಿಗೆ ತಲುಪುವ ಗುರಿಯನ್ನು ಹಾಕಿಕೊಂಡಿದ್ದಾರೆ.

ಮಿಮಿಕ್ರಿ ಆರ್ಟಿಸ್ಟ್ ಆಗಿರೋ ಮಂಜುನಾಥ್ ಅವರಿಗೆ ಬಿಗ್ ಬಾಸ್‍ನಲ್ಲಿ ಭಾಗವಹಿಸಲು ಅವಕಾಶ ಕೊರಲು ಹೊರಟಿದ್ದಕ್ಕೆ, ಹಲವು ಜನರು ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತನ್ನ ಸೈಕಲ್‍ಗೆ ಕನ್ನಡ ಧ್ವಜ ಕಟ್ಟಿಕೊಂಡು ಹೊರಟಿರುವ ಇವರು ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ನಟ ಸುದೀಪ್ ಅವರನ್ನು ಭೇಟಿಯಾಗಲು ಪ್ಲಾನ್ ಮಾಡಿದ್ದಾರೆ.

Leave a Reply

Your email address will not be published. Required fields are marked *