ಲಕ್ನೋ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೀಮಾಕು ತೋರಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಬೌಲರ್ ದಿಗ್ವೇಶ್ ರಥಿಗೆ (Digvesh Rathi) ಬಿಸಿಸಿಐ ಭಾರೀ ದಂಡ ವಿಧಿಸಿದೆ.
ಐಪಿಎಲ್ (IPL) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ 25% ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್
#DigveshRathi provides the breakthrough as #PriyanshArya heads back!
P.S: Don’t miss the celebration at the end! 👀✍🏻
Watch LIVE action of #LSGvPBKS ➡ https://t.co/GLxHRDQajv#IPLOnJiostar | LIVE NOW on Star Sports 1, Star Sports 1 Hindi & JioHotstar! | #IndianPossibleLeague pic.twitter.com/TAhHDtXX8n
— Star Sports (@StarSportsIndia) April 1, 2025
ಆಗಿದ್ದೇನು?
ದಿಗ್ವೇಶ್ ರಥಿ ಮೂರನೇ ಓವರ್ ಎಸೆಯುತ್ತಿದ್ದರು. 5ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಪ್ರಿಯಾಂಶ್ ಆರ್ಯ ಅವರು ಬಲವಾಗಿ ಹೊಡೆಯಲು ಯತ್ನಿಸಿ ಶಾರ್ದೂಲ್ ಠಾಕೂರ್ ಕೈಗೆ ಕ್ಯಾಚ್ ನೀಡಿ ಹೊರ ನಡೆದರು.
8 ರನ್ ಗಳಿಸಿ ಮೈದಾನ ತೊರೆಯುತ್ತಿದ್ದಾಗ ರಥಿ ಪ್ರಿಯಾಂಶ್ ಆರ್ಯ ಬಳಿ ಬಂದು ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದರು. ಉದ್ದೇಶಪೂರ್ವಕವಾಗಿ ಆಟಗಾರನ ಬಳಿ ಬಂದು ಸಂಭ್ರಮಾಚರಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದಿಗ್ವೇಶ್ ರಥಿ ದಂಡ ವಿಧಿಸಿದೆ. ಇದನ್ನೂ ಓದಿ: ಸಿಡ್ನಿ ಸಿಕ್ಸರ್ ಪರ ಆಡಲಿದ್ದಾರೆ ಕೊಹ್ಲಿ!
जल्दबाजी मे किया गया सेलिब्रेशन,
मजाक का कारण बन जाया करता है. #ipl2025 #ipl #LSGvsPBKS #lsg #digveshrathi #PBKSvsLSG pic.twitter.com/tgyYmHZnqS
— आकांक्षी युवा (@IncredibleIV) April 1, 2025
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 171 ರನ್ ಹೊಡೆಯಿತು. ಗುರಿ ಬೆನ್ನಟ್ಟಿದ ಪಂಜಾಬ್ 16.2 ಓವರ್‌ಗಳಲ್ಲಿ 177 ರನ್ ಹೊಡೆದು ಜಯಗಳಿಸಿತು. ಪ್ರಭಸಿಮ್ರನ್ ಸಿಂಗ್ (Prabhsimran Singh) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಈ ಜಯದಿಂದ ಐದನೇ ಸ್ಥಾನದಲ್ಲಿದ್ದ ಪಂಜಾಬ್ ಎರಡನೇ ಸ್ಥಾನಕ್ಕೆ ಜಿಗಿದರೆ ಮೂರನೇ ಸ್ಥಾನದಲ್ಲಿದ್ದ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ.