ನವದೆಹಲಿ: 2023 ರ ವೇಳೆಗೆ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಬಿಸಿಸಿಐ ಯೋಜಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ.
ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸದಿದ್ದಕ್ಕಾಗಿ ಈ ಹಿಂದೆ ಟೀಕೆಗೊಳಗಾದ ಬಿಸಿಸಿಐ, ಮುಂದಿನ ಋತುವಿನಲ್ಲಿ ಲೀಗ್ ಅನ್ನು ಪ್ರಾರಂಭ ಮಾಡಲು ಎಜಿಎಂ ಅನುಮೋದನೆಯ ಅಗತ್ಯವಿದೆ. 2023ರಲ್ಲಿ ಪ್ರಾರಂಭವಾಗುವ ಲೀಗ್‍ನ ಉದ್ಘಾಟನಾ ಆವೃತ್ತಿಯಲ್ಲಿ ಐದು ಅಥವಾ ಆರು ತಂಡಗಳನ್ನು ಹೊಂದಲು ಮಂಡಳಿಯು ಯೋಜಿಸುತ್ತಿದೆ.
Advertisement
Advertisement
ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಅನ್ನು ಎಜಿಎಂ ಅನುಮೋದಿಸಬೇಕಾಗಿದೆ. ಮುಂದಿನ ವರ್ಷದ ವೇಳೆಗೆ ಅದನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ
Advertisement
ಈ ಹಿಂದೆ ಫೆಬ್ರವರಿಯಂದು ಸಂದರ್ಶನವೊಂದರಲ್ಲಿ ಗಂಗೂಲಿ ಮಹಿಳಾ ಐಪಿಎಲ್ ಅನ್ನು 2023 ರಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
Advertisement
ಪುರುಷರ ಐಪಿಎಲ್ ಪ್ಲೇ-ಆಫ್ ಸುತ್ತು ಪ್ರಾರಂಭವಾಗುವ ಮೊದಲು ಮೂರು ಮಹಿಳಾ ತಂಡಗಳ ನಡುವೆ ಈ ಋತುವಿನಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಪ್ಲೇ-ಆಫ್‍ನ ಸಮಯದಲ್ಲಿ ಮೂರು ತಂಡಗಳನ್ನು ಒಳಗೊಂಡ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಸಭೆಯ ನಂತರ ಹೇಳಿದರು. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿದ ಟಾಪ್ ಮ್ಯಾಚ್‍ಗಳು
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್‍ನ ದ್ವಿತೀಯಾರ್ಧವನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕಳೆದ ವರ್ಷ ಮಹಿಳಾ ತಂಡಗಳನ್ನು ಆಡಿಸಿರಲಿಲ್ಲ. 2020ರ ಐಪಿಎಲ್‍ನಲ್ಲಿ ಟ್ರೈಲ್‍ಬ್ಲೇಜರ್ಸ್ ತಂಡವು ಪ್ರಶಸ್ತಿಯನ್ನು ಗೆದ್ದಿತ್ತು.
ಮಹಿಳಾ ತಂಡಗಳ ಆಟಗಳು ಹೆಚ್ಚಾಗಿ ಪುಣೆಯಲ್ಲಿ ನಡೆಯುತ್ತವೆ. ಈ ವರ್ಷದ ಐಪಿಎಲ್ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.