ಬೆಂಗಳೂರು: ಕಾಂಗ್ರೆಸ್‍ನ (Congress) ಸೇ ಸಿಎಂ ಅಭಿಯಾನದ ವಿರುದ್ಧ ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಾಂಗ್ರೆಸ್ ಮಾತು ಇದೆ. ಕಾಂಗ್ರೆಸ್‍ನವರು ಸತ್ಯ ಹರಿಶ್ಚಂದ್ರನ ತುಂಡು ಆಡಿದ ಹಾಗೆ ಆಡ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಅವರಿಗೆ ಮಾಡೋಕೆ ಕೆಲಸ ಇಲ್ಲದೆ ಇಂತಹ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸ ಸಹಿಸಲು ಆಗದೆ ಇಂತಹ ಆರೋಪ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಆದರೆ ಅದು ಕನಸಾಗಿಯೇ ಇರುತ್ತದೆ. ಸುಮ್ಮನೆ ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ನಾವು ಕೊಟ್ಟ ಬಹುತೇಕ ಪ್ರಣಾಳಿಕೆ ಕಾರ್ಯಕ್ರಮಗಳನ್ನು ಈಡೇರಿಕೆ ಮಾಡಿದ್ದೇವೆ. ಎಲ್ಲ ದಾಖಲೆ ಕೊಡುತ್ತೇವೆ. ವಿದ್ಯಾನಿಧಿ ಯೋಜನೆ ರೈತರ ಮಕ್ಕಳಿಗೆ ಕೊಡ್ತಿದ್ದೇವೆ. ಮೋದಿ ಅವರು ನೇರವಾಗಿ ರೈತರ ಖಾತೆಗೆ ಹಣ ಹಾಕ್ತಿದ್ದಾರೆ. ಡಿಸೇಲ್‌ಗೆ ರೈತರಿಗೆ ಹಣ ಕೊಡ್ತಿದ್ದೇವೆ. ಇವೆಲ್ಲ ಕಾಂಗ್ರೆಸ್ ಕಣ್ಣಿಗೆ ಕಾಣೋದಿಲ್ಲವಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ RSS ನಾಯಕರ ಪಾದಪೂಜೆ ಮಾಡಲೇಬೇಕು: ಸಿದ್ದರಾಮಯ್ಯ
ಕಾಂಗ್ರೆಸ್ ಬರೀ ಅಹಿಂದಾ ಅಂತ ಹೇಳಿದ್ದು ಅಷ್ಟೆ. SC-ST ಮೀಸಲಾತಿ ಹೆಚ್ಚಳ ಮಾಡಿದ್ದು ನಾವು. ಕಾಂಗ್ರೆಸ್ ಕೇವಲ ಹೇಳಿದ್ದು ಅಷ್ಟೆ. ನಾವು ಮಾಡಿ ತೋರಿಸಿದ್ದೇವೆ ಎಂದು ತಿರುಗೇಟು ಕೊಟ್ಟರು. ಕಾಂಗ್ರೆಸ್ ಅವರಿಗೆ ಕಾಮಾಲೆ ಕಣ್ಣು. ಅದಕ್ಕೆ ಎಲ್ಲವೂ ಅವರಿಗೆ ಹಳದಿ ಕಾಣುತ್ತಿದೆ. ಹೀಗಾಗಿ ಅವರ ಸಹವಾಸ ಬೇಡ ಅಂತ ನಾವು ಡೈವೋರ್ಸ್ ಮಾಡಿ ಬಂದಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್ ಪಟ್ಟ