ಬೆಂಗಳೂರು: (Bengaluru) ಇಂದಿನಿಂದ ರಾಜಧಾನಿಯಲ್ಲಿ ಮತ್ತೆ ಬಿಬಿಎಂಪಿ (BBMP) ಬುಲ್ಡೋಜರ್‌ಗಳು (Operation Bulldozer) ಘರ್ಜಿಸಲಿವೆ. ಇವತ್ತು ಬಡವರ ಒತ್ತುವರಿ ತೆರವು ಮಾಡುತ್ತಾ ಅಥವಾ ಪ್ರಭಾವಿಗಳ ಒತ್ತುವರಿಗೆ ಜೆಸಿಬಿ ನುಗ್ಗುತ್ತಾ ಎನ್ನುವುದೇ ಎಲ್ಲರ ಪ್ರಶ್ನೆ ಆಗಿದೆ.
ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದ ರೈನ್ ಬೋ ಲೇಔಟ್ ವಿಲ್ಲಾಗಳಿಗೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿ 7 ದಿನ ಕಳೆದಿದೆ. ಒಂದು ವೇಳೆ ಈ ಅವಧಿಯಲ್ಲಿ ಒತ್ತುವರಿ ಜಾಗವನ್ನು ತೆರವು ಮಾಡದಿದಿದ್ದರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕು ಎಂದು 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದರು. ಇದನ್ನೂ ಓದಿ: ನಾನು ಸುಸ್ತಾಗಿದ್ದೇನೆ, ಜ್ವರ 100 ಡಿಗ್ರಿಗೆ ಬಂದಿದೆ – 11 ದಿನದಿಂದ ಮನೆಗೇ ಹೋಗಿಲ್ಲ ಅಂದ ಡಿಕೆಶಿ
Advertisement
Advertisement
ಇನ್ನು ರೈನ್ ಬೋ (Rainbow) ಡ್ರೈವ್ ಲೇಔಟ್‌ನಲ್ಲಿ ಜಿಲ್ಲಾಡಳಿತ ನಡೆಸಿದ ಸರ್ವೆಯಲ್ಲಿ ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಬಹಿರಂಗವಾಗಿತ್ತು. ಸೆಪ್ಟೆಂಬರ್ 1 ರಿಂದ ಈವರೆಗೆ 110 ಕಡೆ ಒತ್ತುವರಿಯನ್ನು ತೆರವು ಮಾಡಲಾಗಿದೆ.
Advertisement
Advertisement
ಇದರ ಮಧ್ಯೆ, ಒತ್ತುವರಿ ಮಾಡಿರುವವರ ಹೆಸರಿನ ಪಟ್ಟಿಯನ್ನು ಕಂದಾಯ ಸಚಿವ ಆರ್.ಅಶೋಕ್ (R.Ashok) ಅವರು ವಿಧಾನಸೌಧದಲ್ಲಿ (Vidhan Soudha) ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ಪಟ್ಟಿಯಲ್ಲಿ ಯಾರ‍್ಯಾರ ಹೆಸರುಗಳು ಇರುತ್ತವೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ