DistrictsKarnatakaLatestLeading NewsMain PostMysuru

ನಾನು ಸುಸ್ತಾಗಿದ್ದೇನೆ, ಜ್ವರ 100 ಡಿಗ್ರಿಗೆ ಬಂದಿದೆ – 11 ದಿನದಿಂದ ಮನೆಗೇ ಹೋಗಿಲ್ಲ ಅಂದ ಡಿಕೆಶಿ

ಮೈಸೂರು: ನಾನು ಮನೆ ಬಿಟ್ಟು 11 ದಿನ ಆಯ್ತು. ಈಗ ಸ್ವಲ್ಪ ಸುಸ್ತಾಗಿದ್ದೇನೆ. ಜ್ವರ (Fever) 100 ಡಿಗ್ರಿಗೆ ಬಂದಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಮೈಸೂರಿನಲ್ಲಿಂದು (Mysuru) ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಸ್ವಲ್ಪ ಸುಸ್ತಾಗಿದ್ದೇನೆ. ಡಾಕ್ಟರ್ (Doctor) ಬಂದು ಚೆಕ್ ಮಾಡಿದ್ರು. ಜ್ವರ 100 ಡಿಗ್ರಿಗೆ ಬಂದಿದೆ. 11 ದಿನವಾಯ್ತು ನಾನು ಮನೆ ಬಿಟ್ಟು. ಸಿದ್ದರಾಮಯ್ಯ (Siddaramaiah) ಅವರು ಸದನದಲ್ಲಿ ಇದ್ದ ಕಾರಣ ನಾನೇ ಎಲ್ಲಾ ಕಡೆ ಓಡಾಡುತ್ತಿದ್ದೆನೆ ಎಂದು ತಿಳಿಸಿದ್ದಾರೆ.

ಕರ್ನಾಟಕ (Karnataka) ಭ್ರಷ್ಟಾಚಾರ ರಾಜಧಾನಿಯಾಗಿದೆ. ಗಾಂಧಿ (Gandhi Family) ಕುಟುಂಬಕ್ಕೆ ಕೇಂದ್ರ ಸರ್ಕಾರ (Central Government) ಬಹಳ ಕಿರುಕುಳ ನೀಡುತ್ತಿದೆ. ಕಿರುಕುಳ ಕೊಟ್ಟರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi) ಅದಕ್ಕೆ ಹೆದರಲ್ಲ. `ಡಿಕೆ ನಾನು ಜೈಲಿಗೆ ಹೋಗಲು ರೆಡಿಯಾಗಿದ್ದೇನೆ? ಹೇಗಿತ್ತು ನಿನಗೆ ಜೈಲಿನ ಅನುಭವ ಹೇಳು? ನನ್ನ ಇಡೀ ಕುಟುಂಬ ತ್ಯಾಗದ ಕುಟುಂಬ ನನ್ನದೇನಿದೆ? ಇವರಿಗೆ ಹೆದರಲ್ಲ ನಾನು ಅಂತಾ ರಾಹುಲ್ ಗಾಂಧಿ ನನಗೆ ಹೇಳಿದರು. ಎಂದು ರಾಹುಲ್‌ಗಾಂಧಿ ಅವರೊಂದಿಗಿನ ಸಂಭಾಷಣೆಯನ್ನು ಬಿಚ್ಚಿಟ್ಟಿದ್ದಾರೆ.

ಮೈಸೂರಿಗೆ ಬರ್ತಾರೆ ಮಹಾ ನಾಯಕಿ: ಮೈಸೂರು ಭಾಗಕ್ಕೆ ಯಾವತ್ತೂ ಬಾರದ ದೊಡ್ಡ ಮಹಿಳಾ ನಾಯಕಿ ಬರುತ್ತಾರೆ. ಆವತ್ತು ಕಾಂಗ್ರೆಸ್ ಮಹಿಳೆಯರ ಶಕ್ತಿ ಪ್ರದರ್ಶನ ಮಾಡಬೇಕು. ಈ ಭಾಗಕ್ಕೆ ಬರ್ತಿರೋ ನಾಯಕಿ ಯಾರು ಅಂತಾ ನಾನು ಈಗ ಹೇಳಲ್ಲ. ಆ ನಾಯಕಿ ಬಂದ ದಿನ ದೊಡ್ಡ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

ಎಲ್ಲದಕ್ಕೂ ಲೆಕ್ಕ ಇಡುತ್ತೇನೆ: ಮೈಸೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು ತಲಾ 15 ಸಾವಿರ ಜನರನ್ನ ಕರೆದುಕೊಂಡು ಬರಬೇಕು. ಸಿದ್ದರಾಮಯ್ಯ ಅವರು 5 ಸಾವಿರ ಜನ ಹೇಳಿದ್ದು ದೂರದ ಪ್ರದೇಶದ ಶಾಸಕರಿಗೆ ಮಾತ್ರ. ಮೈಸೂರು ಭಾಗದ ಶಾಸಕರು, ಮಾಜಿ ಶಾಸಕರು 15 ಸಾವಿರ ಜನ ಕರೆದುಕೊಂಡು ಬರಲೇಬೇಕು. ನೀವೇ ಟೀ ಶರ್ಟ್ ಮಾಡಿಸಿ. ಅದರಲ್ಲಿ ನನ್ನ ಫೋಟೋ, ಸಿದ್ದರಾಮಯ್ಯ ಅವರ ಫೋಟೋ ಬೇಡ. ನಿಮ್ಮ ಫೋಟೋ, ರಾಹುಲ್ ಗಾಂಧಿ ಫೋಟೋ ಹಾಕಿಸಿಕೊಳ್ಳಿ ಸಾಕು. ಕೆಲಸ ಮಾಡದೇ ಇದ್ದರೆ ಅಂಥವರ ಜಾಗಕ್ಕೆ ಬೇರೆಯವರನ್ನ ಸಿದ್ದ ಮಾಡಿ. ಯಾರು ಎಷ್ಟು ಜನ ಕರೆದು ಕೊಂಡು ಬಂದರು ಅನ್ನೋ ಲೆಕ್ಕವನ್ನು ಸರಿಯಾಗಿ ಮಾಡಿಸುತ್ತೇನೆ, ಎಲ್ಲದಕ್ಕೂ ಲೆಕ್ಕ ಇಡುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button