Bengaluru CityDistrictsKarnatakaLatestLeading NewsMain Post

ಹೈಕಮಾಂಡ್ ಟಿಕೆಟ್ ಫೈನಲ್ ಮಾಡುತ್ತೆ- ಡಿಕೆ ವಿರುದ್ಧ ಮುಗಿಬಿದ್ದ ಸಿದ್ದು ಬಣ

- ಸಾಮೂಹಿಕ ನಾಯಕತ್ವ ಇರಲಿ ಎಂದ ದಿನೇಶ್, ದೇಶಪಾಂಡೆ

ಬೆಂಗಳೂರು: ಚುನಾವಣಾ ವರ್ಷದಲ್ಲಿ(Election Year) ರಾಜ್ಯ ಕಾಂಗ್ರೆಸ್‍ನ(Congress) ಪರಿಸ್ಥಿತಿ ಪಂಜಾಬ್ ಕಾಂಗ್ರೆಸ್‍ನ ಸ್ಥಿತಿಯಂತಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬೇಗುದಿ ಹೆಚ್ಚಾಗುತ್ತಿದೆ. ಸಿದ್ದರಾಮೋತ್ಸವದ ವೇದಿಕೆಯಲ್ಲಿ ಸಿದ್ದು-ಡಿಕೆ ದೋಸ್ತಿ ತೋರಿಸಿದ್ದರು. ಈಗ ರಾಹುಲ್ ಗಾಂಧಿಯ(Rahul Gandhi) ಭಾರತ್ ಜೋಡೋ(Bharat Jodo) ಪಾದಯಾತ್ರೆ ವಿಚಾರದಲ್ಲಿ ದಂಗಲ್‍ಗೆ ಕಾರಣವಾಗುತ್ತಿದೆ.

ಕಾಂಗ್ರೆಸ್‍ನಲ್ಲಿ ನಾನೇ ಬಾಸ್ ಎನ್ನುವ ರೀತಿ ವರ್ತಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ವಿರುದ್ಧ ಸಿದ್ದರಾಮಯ್ಯ(Siddaramaiah) ಬಣ ಮುಗಿಬಿದ್ದಿದೆ. ಯಾರೇ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದರೆ ಅದು ಕಾಂಗ್ರೆಸ್‍ನಲ್ಲಿ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಸೈಕಲ್‍ಗೆ ಬೈಕ್ ಡಿಕ್ಕಿ- ಪಲ್ಸರ್ ಸವಾರ ಸ್ಥಳದಲ್ಲೇ ಸಾವು

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು. ಸಿಎಂ ಯಾರು ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಸಮನ್ವಯತೆಯಿಂದ ಓಡಾಡಬೇಕು ಎಂದು ಡಿಕೆಶಿಗೆ ಸಲಹೆಯನ್ನು ಕೊಟ್ಟಿದ್ದಾರೆ.

ಡಿಕೆಶಿ ಹೇಳಿಕೆಯನ್ನು ದೇಶಪಾಂಡೆ ಸಮರ್ಥಿಸಿಕೊಂಡಿದ್ದಾರೆ. ಡಿಕೆಶಿ ಒನ್ ಮ್ಯಾನ್ ಶೋ ತರಹ ಏನು ಮಾಡುತ್ತಿಲ್ಲ. ಉತ್ತಮವಾಗಿ ಸಂಘಟನೆ ಮಾಡುತ್ತಿದ್ದಾರೆ. ನಾನು ದೂರ ಇದೆ ಊರು. ಹೆಚ್ಚು ಜನ ಆಗಲ್ಲ ಅಂದಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಯಾವುದೇ ತಪ್ಪು ಉದ್ದೇಶದಿಂದ ಅವರು ಹೇಳಿಲ್ಲ. ಏನೇ ಭಿನ್ನಾಭಿಪ್ರಾಯ ಇದ್ದರೂ ಸರಿ ಮಾಡಿಕೊಂಡು ಒಟ್ಟಾಗಿ ಹೋಗಬೇಕು. ಟಿಕೆಟ್ ಫೈನಲ್ ಮಾಡೋದು ಹೈಕಮಾಂಡ್ ಅಂದಿದ್ದಾರೆ.

ಸಿದ್ದರಾಮೋತ್ಸವ ಹೊಣೆ ಹೊತ್ತಿದ್ದ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ, ಅಧ್ಯಕ್ಷರಾಗಿ ಡಿಕೆಶಿ ಹೇಳಿಕೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಭಾರತ್ ಜೋಡೋಗಾಗಿ ನೇಮಿಸಿರುವ 18 ಸಮಿತಿಗಳಲ್ಲಿ ಸಿದ್ದರಾಮಯ್ಯ ಬಣಕ್ಕೆ ಮಣೆ ಹಾಕಲಾಗಿದೆ. ಆದರೆ ಆರ್‌ವಿ ದೇಶಪಾಂಡೆಗೆ ಕೊಕ್ ಕೊಡಲಾಗಿದೆ.

Live Tv

Leave a Reply

Your email address will not be published.

Back to top button