ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದ ಕುರಿತು ಕೊನೆಗೂ ವಿನಯ್ ಗೌಡ (Vinay Gowda) ಮೌನ ಮುರಿದಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿಕ ಈ ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಂತ ಕಿಚ್ಚ ಸುದೀಪ್‌ಗೆ (Kiccha Sudeep) ವಿನಯ್ ಧನ್ಯವಾದ ತಿಳಿಸಿದ್ದಾರೆ. ಕೊನೆ ಉಸಿರು ಇರೋವರೆಗೂ ಅವರ ಋಣ ಮರೆಯೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್
ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಕೇಸ್ ಕುರಿತು ವಿನಯ್ ಗೌಡ ಮಾತನಾಡಿ ನಾನು ನಿರೀಕ್ಷೆನೇ ಮಾಡಿರಲಿಲ್ಲ, ಹಾಗೇ ರೀಲ್ಸ್ ಮಾಡೋದು ತಪ್ಪು ಅಂತ ಮೊದಲೇ ಗೊತ್ತಿದ್ರೆ ಮಾಡ್ತಿರಲಿಲ್ಲ. ಆ ರೀಲ್ಸ್ ಅಷ್ಟು ವೈರಲ್ ಆಗಿ ತೊಂದರೆ ಆಗುತ್ತೆ ಎಂದು ತಿಳಿದಿರಲಿಲ್ಲ. ತಿಳಿಯದೇ ಆಗಿರೋ ತಪ್ಪಿಗೆ ಕರ್ನಾಟಕದ ಜನತೆಯ ಬಳಿ ಕ್ಷಮೆ ಕೇಳಿದ್ದೀನಿ. ಇದರಿಂದ ನಮ್ಮ ಫ್ಯಾಮಿಲಿ ಹಾಗೂ ನನ್ನ ಮಗನಿಗೆ ನೋವು ಮಾಡಿದ್ದೀನಿ. ಪ್ರಚಾರಕ್ಕೆ ಎಂದು ಮಾಡಿದ ಲಾಂಗ್ ಹಿಡಿದ ರೀಲ್ಸ್‌ನಿಂದ ತೊಂದರೆ ಆಯ್ತು. ನನ್ನ ಜೀವನದಲ್ಲಿ ಪೊಲೀಸ್ ಸ್ಟೇಷನ್ ನೋಡದೇ ಇರೋನು, ಇದರಿಂದ ಜೈಲಿಗೆ ಹೋಗಿ ಬರುವಂತೆ ಆಯ್ತು. ನಮ್ಮ ಕುಟುಂಬದಲ್ಲಿಯೂ ಯಾರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ. ಇದನ್ನೂ ಓದಿ:ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ
ಈ ಪ್ರಕರಣದ ವೇಳೆ, ಸುದೀಪ್ ಸರ್ ನಮ್ಮ ಫ್ಯಾಮಿಲಿ ಜೊತೆ ನಿಂತರು. ಈ ಕೇಸ್ ಬಗ್ಗೆ ಮನೆಯಲ್ಲಿ ಏನು ಗೊತ್ತಿರಲಿಲ್ಲ. ನನಗೆ ಜೈಲು ಅಂದಾಗ ಮನೆಯಲ್ಲಿ ಶಾಕ್ ಆಗಿದ್ದರು. ಆ ಟೈಮ್‌ನಲ್ಲಿ ಸುದೀಪ್ ಸರ್ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಕಾನೂನು ಪ್ರಕಾರ ಏನು ಮಾಡಬೇಕು ಅದರಂತೆ ಸುದೀಪ್ ನಿಂತು ನಮಗೆ ಬೆಂಬಲಿಸಿದ್ದಾರೆ. ಆ ದಿನ ನಮ್ಮ ಕುಟುಂಬದ ಜೊತೆ ನಿಂತು ಸಹಾಯ ಮಾಡಿದ್ದಾರೆ. ಕೊನೆ ಉಸಿರು ಇರೋವರೆಗೂ ಅವರ ಋಣ ನಾನು ಮರೆಯೋದಿಲ್ಲ. ಈ ನಿಯತ್ತು ಕೊನೆವರೆಗೂ ಇರುತ್ತದೆ ಎಂದಿದ್ದಾರೆ.
ಸುದೀಪ್ ಸರ್ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರು ನಟಿಸುತ್ತಿರೋ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ವಿನಯ್ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಹಾಗೂ ರಜತ್‌ರನ್ನು ಬಂಧಿಸಲಾಗಿತ್ತು. ಮಾ.28ರಂದು ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಬೇಲ್ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕ ಹಿನ್ನೆಲೆ ಮಾ.29ರಂದು ಜೈಲಿನಿಂದ ವಿನಯ್ ಮತ್ತು ರಜತ್‌ರನ್ನು ರಿಲೀಸ್ ಮಾಡಲಾಯಿತು.