ಫಿನಾಲೆ ಹತ್ತಿರವಾಗುತ್ತಿದೆ ನಾನು ಶಿವರಾಜ್ಕುಮಾರ್ ಅಭಿಮಾನಿ ಅವರಿಂದ ಶುಭ ಹಾರೈಕೆ ಬೇಕು ಎಂದು ಬಿಗ್ಬಾಸ್ ಸ್ಪರ್ಧಿ ಮಂಜು ಪಾವಗಡ ಕೇಳಿಕೊಂಡಿದ್ದರು. ಅದರಂತೆ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಇಂದು ಮಂಜು ಪಾವಗಡಗೆ ಶುಭಹಾರೈಕೆಯ ವೀಡಿಯೋವನ್ನು ಕಳುಹಿಸಿಕೊಟ್ಟಿದ್ದಾರೆ.
ಮನೆಯಲ್ಲಿ 5 ಸ್ಪರ್ಧಿಗಳಿದ್ದು ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯುತ್ತಿದೆ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು. ಬಿಗ್ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಕಿವಿ ಆಕೃತಿ ಒಂದನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಈಡೇರುವ ಆಸೆ ಆಗಿದ್ದರೆ ಬಿಗ್ಬಾಸ್ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದರು. ಈ ವೇಳೆ ಮಂಜು ಪಾವಗಡ ಶಿವರಾಜ್ಕುಮಾರ್ ಅವರ ಶುಭ ಹಾರೈಕೆ ಬೇಕು ಎಂದು ಕೋರಿದ್ದರು. ಇದನ್ನೂ ಓದಿ: RRR ಚಿತ್ರದ ಸೆಟ್ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್
View this post on Instagram
ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ಪ್ಲೀಸ್ ದಯವಿಟ್ಟು ಇದನ್ನು ನೆರವೇರಿಸಿ ಎಂದು ಮಂಜು ಕವಿಯ ಆಕೃತಿ ಬಳಿ ಕೋರಿದ್ದರು. ಇದು ಈಡೇರಿದೆ. ಹಾಯ್ ಮಂಜು ಬಿಗ್ಬಾಸ್ ಫಿನಾಲೆಗೆ ಬಂದಿದ್ದೀರಿ. ಇದನ್ನು ಕೇಳಿ ತುಂಬಾನೇ ಖುಷಿ ಆಯ್ತು. ಗೆದ್ದು ಬನ್ನಿ. ಫಿನಾಲೆ ಹಂತ ತಲುಪಿದ ಎಲ್ಲರಿಗೂ ಒಳ್ಳೆಯದಾಗಲಿ. ಮಂಜು ನಿಮಗೆ ಮತ್ತೊಮ್ಮೆ ಆಲ್ ದಿ ಬೆಸ್ಟ್. ಲವ್ ಯು ಎಂದು ವಿಷ್ ಮಾಡಿದ್ದಾರೆ.
ಈ ವಿಡಿ ಯೋ ಪ್ಲೇ ಆಗುತ್ತಿದ್ದಂತೆ ಜೋರಾಗಿ ಖುಷಿಯಿಂದ ಕುಣಿದಾಡಿದ್ದಾರೆ. ಫ್ಯಾನ್ ಆಸೆ ಈಡೇರಿಸಿದ ಶಿವಣ್ಣ ಅವರ ಈ ಪ್ರೀತಿಯ ಶುಭಾಶಯ ಕೇಳಿ ಬಿಗ್ಬಾಸ್ ಫಿನಾಲೆ ಹಂತದಲ್ಲಿರುವ ಟಾಪ್5 ಸ್ಪರ್ಧಿಗಳು ಸಖತ್ ಖುಷಿಯಾಗಿದ್ದಾರೆ. ‘