ಕತ್ರಿನಾ ಕೈಫ್‌ಗೆ ಬೌಲಿಂಗ್‌ ಮಾಡಿದ ಹರ್ಭಜನ್‌ ಸಿಂಗ್‌

Advertisements

ಮುಂಬೈ: ಟೀಂ ಇಂಡಿಯಾದ (Team India) ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಕ್ರಿಕೆಟ್ ಆಡಿ ಮನರಂಜಿಸಿದ್ದಾರೆ.

Advertisements

ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa)  ನಡುವಿನ ಟಿ20 ವಿಶ್ವಕಪ್ (T20 World Cup) ಪಂದ್ಯದ ಕುರಿತಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕ್ರಿಕೆಟ್ ವಿಶ್ಲೇಷಣೆಯಲ್ಲಿ ಪಾಲ್ಗೊಂಡಿದ್ದ ಕತ್ರಿನಾ ಕೈಫ್ ಮತ್ತು ಹರ್ಭಜನ್ ಸಿಂಗ್ ಕ್ರಿಕೆಟ್ ಆಡಿ ಗಮನಸೆಳೆದರು. ಇದನ್ನೂ ಓದಿ: ಖಾಸಗಿತನಕ್ಕೆ ಧಕ್ಕೆ ತರಬೇಡಿ – ಹೋಟೆಲ್ ವಿರುದ್ಧ ಕೊಹ್ಲಿ ಕೆಂಡ

Advertisements

ಹರ್ಭಜನ್ ಸಿಂಗ್ ಬೌಲಿಂಗ್ ಮಾಡಿದರು. ಕತ್ರಿನಾ ಕೈಪ್ ಬ್ಯಾಟಿಂಗ್ ಮಾಡಿ ಮಿಂಚಿದರು. ಈ ವೀಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‍ನಲ್ಲೂ ಕಿಂಗ್ ಕೊಹ್ಲಿ ದಾಖಲೆಯ ಸರದಾರ

Advertisements

ಇನ್ನೂ ನಿನ್ನೆಯ ಪಂದ್ಯದಲ್ಲಿ ಭಾರತ ನೀಡಿದ 134 ರನ್‍ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಮಾರ್ಕಮ್ 52 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಡೇವಿಡ್ ಮಿಲ್ಲರ್ ಅಜೇಯ 56 ರನ್ (46 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿದ ನೆರವಿನಿಂದ 19.4 ಓವರ್‌ಗಳಲ್ಲಿ 137 ರನ್ ಸಿಡಿಸಿ ಇನ್ನೆರಡು ಎಸೆತ ಬಾಕಿ ಇರುವಂತೆ ಆಫ್ರಿಕಾ 5 ವಿಕೆಟ್‍ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ. ಇತ್ತ ಭಾರತ ಮುಂದಿನ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ನವೆಂಬರ್ 2 ರಂದು ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಪಂದ್ಯವಾಡಲಿದೆ.

Live Tv

Advertisements
Exit mobile version