ಬೆಂಗಳೂರು: ನಾಗರಹೊಳೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮರಿಯಾನೆಗೆ (Elephant) ಸೂಕ್ತ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬುಧವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಾಗರಹೊಳೆ ಅಭಯಾರಣ್ಯಕ್ಕೆ (Nagarahole) ಭೇಟಿ ನೀಡಿದ್ದರು. ಈ ವೇಳೆ ತಾಯಿ ಆನೆಯೊಂದಿಗೆ ಮರಿಯಾನೆಯ ನರಳಾಟವನ್ನು ಕಂಡಿದ್ದಾರೆ. ಆ ಮರಿಯಾನೆಗೆ ಸೊಂಡಿಲು ಹಾಗೂ ಬಾಲದ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ ಬರೆದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮರಿಯಾನೆಯನ್ನು ರಕ್ಷಿಸಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ರೈತರ ಸಂಕಷ್ಟ, ಆತ್ಮಹತ್ಯೆ ಡಬಲ್ ಆಗಿದೆ – ಕಾಂಗ್ರೆಸ್ ವಾಗ್ದಾಳಿ
Advertisement
Advertisement
ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಅವರ ಕಾಳಜಿಯನ್ನು ಪ್ರಶಂಸಿದ್ದಾರೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಿ ಮರಿ ಆನೆಯ ಬಗ್ಗೆ ವಿಚಾರಿಸಲಾಗಿದೆ. ಕಾಡುಪ್ರಾಣಿಯ ದಾಳಿಯಿಂದಾಗಿ ಈ ರೀತಿಯ ತೊಂದರೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಗಾಯಾಳು ಆನೆಮರಿಯ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸೊಂಡಿಲು ಗಾಯದಿಂದ ಬಳಲುತ್ತಿರುವ ಮರಿಯಾನೆ- ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ