Bengaluru CityDistrictsKarnatakaLatestMain Post

ಸೊಂಡಿಲು ಗಾಯದಿಂದ ಬಳಲುತ್ತಿರುವ ಮರಿಯಾನೆ- ಬೊಮ್ಮಾಯಿಗೆ ರಾಹುಲ್ ಗಾಂಧಿ ಪತ್ರ

ಬೆಂಗಳೂರು: ನಾಗರಹೊಳೆಯಲ್ಲಿ ಸೊಂಡಿಲು ಗಾಯದಿಂದ ಬಳಲುತ್ತಿರುವ ಮರಿಯಾನೆಯ ರಕ್ಷಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ರಾಹುಲ್ ಗಾಂಧಿ (Rahul Gandhi) ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ನಾನು ಹಾಗೂ ಸೋನಿಯಾಗಾಂಧಿ ನಾಗರಹೊಳೆಗೆ (Nagarahole) ಭೇಟಿ ನೀಡಿದ್ದೆವು. ಈ ವೇಳೆ ತಾಯಿ ಆನೆಯೊಂದಿಗೆ ಮರಿಯಾನೆಯ ನರಳಾಟವಾಡುತ್ತಿತ್ತು. ಈ ತಾಯಿಯೊಂದಿಗಿದ್ದ ಗಾಯಾಳು ಮರಿಯಾನೆಯನ್ನು (Elephant) ನೋಡಿ ಸಂಕಟವಾಯಿತು. ಆ ಮರಿಯಾನೆಗೆ ಸೊಂಡಿಲು ಹಾಗೂ ಬಾಲದ ಗಾಯವಾಗಿದೆ. ಇದರಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಮರಿ ಆನೆಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದೆ. ಮರಿಯಾನೆಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ ಎಂದು ಪತ್ರದ ಮೂಲಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಸರಾ ರಜೆ ಮುಗಿಸಿ ಬೆಂಗಳೂರಿನತ್ತ ಜನ – ಬಸ್ ತುಂಬಿ ಟಾಪ್ ಮೇಲೂ ಪ್ರಯಾಣ

Live Tv

Leave a Reply

Your email address will not be published. Required fields are marked *

Back to top button